ಹಿಂದೆ ನಾವಿಬ್ಬರು ನಮಗಿಬ್ಬರು ಎಂಬ ಜಾಹೀರಾತು ಬರುತ್ತಿತ್ತು, ಬಳಿಕ ಅದು ನಾವಿಬ್ಬರು ನಮಗೆ ಒಂದೇ ಎಂದಾಯಿತು. ಆದರೆ ಜನಸಂಖ್ಯೆ ದೇಶದಲ್ಲಿ ಸಮಸ್ಯೆಯಾಗಿ ತೋರಿಸಲಾಗುತ್ತದೆ.

ಶಿಲ್ಲಾಂಗ್ ನಲ್ಲಿ ಚರ್ಚೊಂದು ವಿಶೇಷ ಘೋಷಣೆ ಹೊರಡಿಸಿದೆ. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ದಂಪತಿಗೆ ನಗದು ಬಹುಮಾನ ನೀಡುವುದಾಗಿ ಕ್ರೈಸ್ತರ ಸಂಖ್ಯೆ ಅಧಿಕವಾಗಿರುವ ಮಿಜೋರಾಂ ಲುಂಗ್ಲೆ ಬಾಜಾರ್ ವೆಂಗ್ ಬ್ಯಾಪ್ಟಿ ಸ್ಟ್ ಚರ್ಚ್ ಘೋಷಿಸಿದ್ದು, 4ನೇ ಮಗುವಿಗೆ 4000 ರೂಪಾಯಿ ಮತ್ತು 5ಕ್ಕಿಂತ ಹೆಚ್ಚು ಮಕ್ಕಳಾದಲ್ಲಿ 5000 ರೂಪಾಯಿ ನೀಡುವುದಾಗಿ ಚರ್ಚ್ನ ಕಾರ್ಯದರ್ಶಿ ತಿಳಿಸಿದ್ದಾರೆ

ಮಿಜೊರಾಂನಲ್ಲಿ ಜನನ ಪ್ರಮಾಣ ಕಡಿಮೆಯಿರುವುದೇ ಇದಕ್ಕೆ ಕಾರಣವಾಗಿದೆ. ಆದಿವಾಸಿಗಳ ಜನಸಂಖ್ಯೆ ದಿನದಂದ ದಿನಕ್ಕೆ ಕಡಿಮೆಯಾಗುತ್ತಿದ್ದು ಚರ್ಚ್‌ಗಳಲ್ಲೂ ಆತಂಕ ವ್ಯಕ್ತವಾಗಿದೆ.

Leave a Reply