ಚೆನ್ನೈ: ತಂಜಾವೂರ್ ಪ್ರಾಚೀನ ಮತ್ತು ಪ್ರಸಿದ್ಧ ಬೃಹದೀಶ್ವರ ಮಂದಿರದ ಅಸಲಿ ವಿಗ್ರಹಗಳ ಬದಲಿಗೆ ನಕಲಿ ವಿಗ್ರಹಿಸಿ ಇರಿಸಿದ ಘಟನೆ ವರದಿಯಾಗಿದೆ. ಸಾವಿರ ವರ್ಷ ಹಳೆಯ 41 ವಿಗ್ರಹಗಳನ್ನು ಬದಲಾಯಿಸಿ ನಕಲಿ ವಿಗ್ರಹಗಳನ್ನು ಸ್ಥಾಪಿಸಲಾಗಿದ್ದು, ನಟರಾಜ ವಿಗ್ರಹ ಸಹಿತ ಹಲವು ವಿಗ್ರಹಗಳು ಇಲ್ಲಿಂದ ಕಳವಾಗಿದೆ ಎಂದು ವಿಗ್ರಹ ಕಳ್ಳಸಾಗಣೆ ಕುರಿತು ತನಿಖೆ ವಿಶೇಷ ಪೊಲೀಸರ ತಂಡ ತನಿಖೆಯ ವೇಳೆ ಪತ್ತೆಹಚ್ಚಿದೆ. ಅಸಲಿ ವಿಗ್ರಹಗಳಿದ್ದಲ್ಲಿಂದ ಅವುಗಳನ್ನು ತೆಗೆದು ನಕಲಿ ವಿಗ್ರಹಗಳನ್ನು ಸ್ಥಾಪಿಸಲಾಗಿದೆ.

ಚೆನ್ನೈ ಸೈದಾಪೇಟ್ಟದ ಉದ್ಯಮಿ ರಣವೀರ್ ಶಾರ ಎಂಬವರ ಮನೆಯಿಂದ ಪೊಲೀಸರು ಇತ್ತೀಚೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ವಿಗ್ರಹಗಳು ಪತ್ತೆಯಾಗಿದ್ದವು. ನಂತರ ತಂಜಾವೂರ್ ವಿಶ್ವ ಪ್ರಸಿದ್ಧ ಬೃಹದೀಶ್ವರ ಮಂದಿರದಲ್ಲಿ ಪೊಲೀಸಧಿಕಾರಿಗಳು ತನಿಖೆ ನಡೆಸಿದ್ದರು. ಮೊದಲ ಹಂತದ ತನಿಖೆಯ ವೇಳೆ ಹತ್ತು ಮೂರ್ತಿಗಳು ನಾಪತ್ತೆಯಾಗಿರುವುದು ಕಂಡು ಬಂದಿದ್ದರೆ, ಎರಡನೆ ಹಂತದ ತನಿಖೆಯ ವೇಳೆ ಇನ್ನೂ 31 ವಿಗ್ರಹಗಳು ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಈ ಮಂದಿರದಿಂದ ಕಾಣೆಯಾದ ವಿಗ್ರಹಗಳೇ ಉದ್ಯಮಿ ಶಾರ ಮನೆಯಲ್ಲಿ ಸಿಕ್ಕಿವೆಯೇ ಎಂದು ಪೊಲೀಸರು ಸ್ಪಷ್ಟಪಡಿಸಿಲ್ಲ.

Leave a Reply