ಮಂಗಳೂರು: ಮಕ್ಕಳಲ್ಲಿ ಆತಂಕ ಖಿನ್ನತೆ ಹೆಚ್ಚಾಗುತ್ತಿದ್ದು ಮಕ್ಕಳು ಆತ್ಮಹತ್ಯೆಗೆ ಶರಣಾಗುವಂತಹ ಹಲವಾರು ಘಟನೆಗಳನ್ನು ನಾವು ದಿನನಿತ್ಯ ನೋಡುತ್ತಿರುತ್ತೇವೆ. ಇದೀಗ ಮಂಗಳೂರಿನಲ್ಲಿ ನಡೆದ ದುರಂತ ಘಟನೆಯೊಂದರಲ್ಲಿ ಐದನೆಯ ತರಗತಿಯ ವಿದ್ಯಾರ್ಥಿಗಳು ನಂಬರ್ 27ರ ಬುಧವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. 5ನೇ ತರಗತಿಯಲ್ಲಿ ಕಲಿಯುತ್ತಿರುವ ಪುಟ್ಟ ಹುಡುಗಿ ಧ್ರುವಿ ಮೃತ ದುರ್ದೈವಿ. ಆಕೆ ಕಿನ್ನಿಗೋಳಿಯ ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದಳು.

ವರದಿಗಳ ಪ್ರಕಾರ ಸ್ಥಳೀಯ ಚರ್ಚ್ ನಲ್ಲಿ ಹಬ್ಬದ ಕಾರ್ಯಕ್ರಮ ಇದ್ದ ಕಾರಣ ಬುಧವಾರ ಶಾಲೆಗೆ ರಜೆ ಇತ್ತು. ಧ್ರುವಿ ಮನೆಯಲ್ಲಿ ಟಿವಿ ನೋಡುತ್ತಿದ್ದಳು. ವಿದ್ಯುತ್ ಸ್ಥಗಿತಗೊಂಡಾಗ ಅವಳೊಂದಿಗೆ ಅಜ್ಜಿ ಓದುವಂತೆ ಹೇಳಿದರು. ಈ ಮಾತು ಕೇಳಿ ಧ್ರುವಿ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿದ್ದಳು. ಕೋಣೆಯಿಂದ ಹೆಚ್ಚು ಹೊತ್ತು ಹೊರಗೆ ಬಾರದಿದ್ದಾಗ ಅಜ್ಜಿ ನೋಡಿದಾಗ ಕಿಟಿಕಿಯಿಂದ ಇಣುಕಿ ನೋಡಿದಾಗ ಧ್ರುವಿ ನೇತಾಡುತ್ತಿರುವ ದೃಶ್ಯ ಕಂಡು ಬಂತು. ತನ್ನ ಹೇರ್ ರಿಬ್ಬನ್ ಸಹಾಯದಿಂದ ಧ್ರುವಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಸಣ್ಣ ಮಕ್ಕಳಲ್ಲಿ ಅತಿಯಾದ ಕಲಿಕೆಯ ಒತ್ತಡ, ಪರೀಕ್ಷೆಯ ಭಯ, ಸ್ಪರ್ಧಾತ್ಮಕ ಮನೋಭಾವ ಕೆಲವೊಮ್ಮೆ ಅವರಲ್ಲಿ ಇಂತಹ ಹೆಜ್ಜೆ ಹೆಜ್ಜೆ ಇಡಲು ಮುಖ್ಯ ಕಾರಣ ಎನ್ನಲಾಗುತ್ತಿದೆ. ಸಣ್ಣಂದಿನಲ್ಲಿ ಮಕ್ಕಳಿಗೆ ಕೌನ್ಸಿಲಿಂಗ್ ಮತ್ತು ಆತ್ಮಶಕ್ತಿ ಆತ್ಮವಿಶ್ವಾಸವನ್ನು ಮೂಡಿಸಲು ಶಾಲೆಯಿಂದಲೇ ಮನೆಯಿಂದಲೇ ಪ್ರಯತ್ನಿಸಬೇಕು. ಜೀವನ ಎಂಬುದು ಕೇವಲ ಪಠ್ಯ ಪುಸ್ತಕಗಳ ಪರೀಕ್ಷೆಯಲ್ಲ, ಜೀವನ ಎಂಬುದು ಸವಾಲುಗಳನ್ನು ಸ್ವೀಕರಿಸಲು ಇರುವುದಾಗಿದೆ ಎಂಬುದನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡಬೇಕಾಗಿದೆ.

LEAVE A REPLY

Please enter your comment!
Please enter your name here