ಹೈದರಾಬಾದ್ ನಲ್ಲಿ ನಾಯಿಯೊಂದು ದಾಳಿ ಮಾಡಿದ ಪರಿಣಾಮವಾಗಿ 5 ವರ್ಷದ ಹುಡುಗ ತೀವ್ರವಾಗಿ ಗಾಯಗೊಂಡಿದ್ದು, ಈ ಘಟನೆ ಮಂಗಳವಾರ ಮಿಯಾಪುರ್ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದೆ.

ತನ್ನ ತಂದೆ ಮತ್ತು ಸಹೋದರನೊಂದಿಗೆ ನಡೆದು ಹೋಗುತ್ತಿದ್ದ ಹುಡುಗನ ಮೇಲೆ ಭಯಾನಕವಾಗಿ ಶ್ವಾನ ದಾಳಿ ಮಾಡಿದ್ದು ಸಿಸಿ ಟಿವಿಯಲ್ಲಿ ಗೋಚರಿಸಿದೆ. ಹುಡುಗನ ತಂದೆ ಮತ್ತು ಇನ್ನಿತರ ನೆರೆಹೊರೆಯವರು ನಾಯಿಯಿಂದ ಹುಡುಗನನ್ನು ತಪ್ಪಿಸಲು ಪ್ರಯತ್ನಿಸುತ್ತಿರುವಾಗ ಇನ್ನೊಂದು ನಾಯಿ ದಾಳಿ ಮಾಡುತ್ತದೆ. ಸುಮಾರು 30-ಸೆಕೆಂಡ್ ಹೋರಾಟದ ನಂತರ, ಅವರು ನಾಯಿಗಳ ನಿಯಂತ್ರಣದಿಂದ ಹುಡುಗನನ್ನು ಬಿಡಿಸುತ್ತಾರೆ. ಆದರೆ ಈ ಮಧ್ಯೆ ಮಗು ಸೀರಿಯಸ್ ಆಗಿದೆ.

ಸುಶಾಂತ್ ನನ್ನು ತಕ್ಷಣ ಸ್ಥಳೀಯ ಅಪೊಲೊ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಅಲ್ಲಿ ಸುಶಾಂತ್ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.

Leave a Reply