ಆಗ್ರ. ಡಿ.26: ದೇಶದಲ್ಲಿ ಹದಿನಾರು ರಾಜ್ಯಗಳಲ್ಲಿ 50,000 ಮದರಸ ಶಿಕ್ಷಕರಿಗೆ ಕಳೆದ ಎರಡು ವರ್ಷಗಳಿಂದ ಕೇಂದ್ರ ಸರಕಾರದ ವತಿಯಿಂದ ಸಂಬಳ ಸಿಕ್ಕಿಲ್ಲ. ಆದ್ದರಿಂದ ಅವರು ಕೆಲಸ ತೊರೆಯುವುದು ಅನಿವಾರ್ಯವಾಗಿದೆ. ಇದರಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ಝಾರ್ಕಂಡ್ ರಾಜ್ಯಗಳು ಸೇರಿವೆ. ಮದರಸಾ ಶಿಕ್ಷಕರಿಗೆ ಸ್ಕೀಮ್ ಫಾರ್ ಪ್ರೊವೈಡಿಂಗ್ ಕ್ವಾಲಿಟಿ ಎಜುಕೇಶನ್(ಎಸ್‍ಪಿಕ್ಯು ಇಎಂ) ಅಡಿಯಲ್ಲಿ ಕೇಂದ್ರ ಸರಕಾರ ಸಂಬಳ ಕೊಡುತ್ತಿತ್ತು.
ಎಸ್‍ಪಿಕ್ಯೂಎಂ ಯೋಜನೆಯನ್ನು ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವಾಲಯದ ಮೂಲಕ 2008-09ರಲ್ಲಿ ಮದರಸಾಗಳಿಗೆ ಗುಣ ಮಟ್ಟದ ಶಿಕ್ಷಣ ಕೊಡಿಸಲಿಕ್ಕಾಗಿ ಜಾರಿ ಮಾಡಲಾಗಿತ್ತು. ಈ ರೀತಿ ಮದರಸಾ ಶಿಕ್ಷಕರ ಸಂಬಳದ ದೊಡ್ಡ ಪಾಲು ಕೇಂದ್ರ ಸರಕಾರದ ವತಿಯಿಂದ ಬರುತ್ತಿತು. ಗ್ರಾಜ್ಯವೇಟ್ ಶಿಕ್ಷಕರಿಗೆ ತಿಂಗಳಿಗೆ ಆರು ಸಾವಿರ ರೂಪಾಯಿ, ಪೋಸ್ಟ್ ಗ್ರಾಜ್ಯುವೇಟ್ ಶಿಕ್ಷಕರಿಗೆ ತಿಂಗಳಿಗೆ 12,000 ರೂಪಾಯಿ ಪ್ರತಿ ತಿಂಗಳು ಸಂಬಳ ಕೊಡಲಾಗುತ್ತಿತು. ಉಳಿದ ಹಣವನ್ನು ರಾಜ್ಯ ಸರಕಾರಗಳು ಹೊಂದಿಸಿ ಕೊಡಬೇಕಾಗಿತ್ತು.
ಅಖಿಲ ಭಾರತ ಮದರಸಾ ಆಧುನೀಕರಣ ಶಿಕ್ಷಕ ಸಂಘ (ಎಬಿಎಮ್‍ಎಎಸ್‍ಎಸ್) ದ ಮುಸ್ಲಿಂ ರಝಖಾನ್ ಭಾರತದಲ್ಲಿ ಅರ್ಧ ಮದ್ರಸಾ ಉತ್ತರ ಪ್ರದೇಶದಲ್ಲಿದೆ ಎಂದಿದ್ದಾರೆ. ಇಲ್ಲಿ 25,000 ಶಿಕ್ಷಕರಿದ್ದಾರೆ. 16 ರಾಜ್ಯಗಳಲ್ಲಿ ಕೇಂದ್ರ ಸರಕಾರ ಎರಡು ವರ್ಷಗಳಿಂದ ಸಂಬಳ ಕೊಟ್ಟಿಲ್ಲ. ಕೆಲವು ರಾಜ್ಯದಲ್ಲಿ ಮೂರು ವರ್ಷಗಳಿಂದ ಕೊಟ್ಟಿಲ್ಲ. ನಾವು ಜನವರಿ ಎಂಟಕ್ಕೆ ಲಕ್ನೊದಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ ಎಂದು ರಝಖಾನ್ ಹೇಳಿದ್ದಾರೆ.

Leave a Reply