ಕೊರೋನಾ ಕಾಲದಲ್ಲಿ ಹಲವು ಜನರ ಉದ್ಯೋಗಕ್ಕೆ ಆಪತ್ತು ಬಂದಿದೆ. ಹಲವಾರು ಮಂದಿ ಉದ್ಯೋಗ ಕಳಕೊಂಡಿದ್ದಾರೆ. ಅನೇಕ ವ್ಯವಹಾರಗಳು ಸ್ಥಗಿತಗೊಂಡಿದೆ. ವಿದ್ಯಾವಂತರು ಪಕೋಡ ತರಕಾರಿಗಳನ್ನು ಮಾರಾಟ ಮಾಡುವ ಪರಿಸ್ಥಿತಿ ಬಂದಿತ್ತು. 7 ಸ್ಟಾರ್ ಹೋಟೆಲ್‌ನ ಬಾಣಸಿಗನಾಗಿ ಕೆಲಸಕ್ಕಿದ್ದ ಅಕ್ಷಯ್ ಕೆಲಸ ಕಳೆದುಕೊಂಡಿದ್ದು, ಇದೀಗ ಅವರು ಸಣ್ಣ ಬಿರಿಯಾನಿ ಅಂಗಡಿಯೊಂದನ್ನು ಪ್ರಾರಂಭಿಸಿದ್ದಾರೆ.

ಮುಂಬೈನ ದಾದರ್ ನಲ್ಲಿ ಅಕ್ಷಯ್ ರಸ್ತೆ ಬದಿಯ ಸ್ಟಾಲ್‌ನಲ್ಲಿ ಬಿರಿಯಾನಿ ಮಾರಾಟ ಮಾಡಲು ಪ್ರಾರಂಭಿಸಿದ್ದು, ಫೇಸ್‌ಬುಕ್ ಪುಟ ಬೀಂಗ್‌ಮಲ್ವಾನಿ ಈ ಬಗ್ಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದಾದ ಬಳಿಕ ಅವರ ವಿಷಯ ಮುನ್ನೆಲೆಗೆ ಬಂದಿದ್ದು, ಯಾವ ಪರಿಸ್ಥಿತಿಯಲ್ಲೂ ಯಾವುದೇ ಕೆಲಸ ಮಾಡಲು ಹಿಂಜರಿಯಬಾರದು ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

“ಲೈಫ್ ನಿಮಗೆ ಒಂದು ಅವಕಾಶವನ್ನು ನೀಡುತ್ತದೆ, ಈಗ ಆ ಅವಕಾಶವನ್ನು ಹೇಗೆ ಚಿನ್ನವಾಗಿ ಪರಿವರ್ತಿಸಬೇಕು ಎಂಬುದು ನಿಮಗೆ ಬಿಟ್ಟದ್ದು. ಈ ಲಾಕ್‌ಡೌನ್‌ಗೆ ಮುಂಚಿತವಾಗಿ, ಅವರು ಮುಂಬೈನ ತಾಜ್ ಹೋಟೆಲ್‌ನಂತಹ 7 ಸ್ಟಾರ್ ನಲ್ಲಿ ಮತ್ತು ಅಂತರರಾಷ್ಟ್ರೀಯ ಕ್ರೂಸ್‌ನಲ್ಲಿ ಬಾಣಸಿಗರಾಗಿ ಕೆಲಸ ಮಾಡಿದರು ಸುಮಾರು 8 ವರ್ಷಗಳ ಕಾಲ ಬಾಣಸಿಗರಾಗಿ ಕೆಲಸ ಮಾಡಿದರು” ಎಂಬ ಸಂದೇಶ ನೀಡಲಾಗಿದೆ. ಮಾತ್ರವಲ್ಲ ಅಕ್ಷಯ್ ರವರ ಬಿರಿಯಾನಿ ತುಂಬಾ ಸ್ವಾದಿಷ್ಟಕರವಾಗಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

Leave a Reply