ಗುಜರಾತ್ ನ ಮೊರ್ಬಿ ನಗರದಲ್ಲಿ ಓರ್ವ ವೃದ್ಧ ವ್ಯಕ್ತಿ ಡಾಬಾ ನಡೆಸುತ್ತಿದ್ದಾರೆ. ಇದೀಗ ಅವರ ಡಾಬಾ ಕೂಡ ತುಂಬಾ ಫೇಮಸ್ ಆಗಿದೆ. ‘ಬಚುದಾದ ಕಾ ಡಾಬಾ’ ಎಂಬ ಈ ಡಾಬಾ ಕಳೆದ 40 ವರ್ಷಗಳಿಂದ ಅವರು 40 ರೂಪಾಯಿಗೆ ಹೊಟ್ಟೆ ತುಂಬಾ ಆಹಾರ ನೀಡುತ್ತಿರುವುದು ವಿಶೇಷವಾಗಿದೆ. ಮಾತ್ರವಲ್ಲ, ಯಾರ ಬಲಿಯಾದರೂ ಹಣ ಇಲ್ಲದದಿದ್ದರೆ ಅವರಿಗೆ ಉಚಿತವಾಗಿ ಆಹಾರ ನೀಡಲಾಗುತ್ತದೆ.

72 ವರ್ಷದ ಬಚು ದಾದಾ ಕಳೆದ 40 ವರ್ಷಗಳಿಂದ ಮೊರ್ಬಿ ನಗರದಲ್ಲಿ ವಾಸಿಸುತ್ತಿದ್ದು, ಅವರು ಒಂದು ಪುಟ್ಟ ಗುಡಿಸಲಲ್ಲಿ ವಾಸಿಸುತ್ತಾರೆ. ಒಂದು ತಟ್ಟೆ ಆಹಾರಕ್ಕೆ ದರ 40 ರೂಪಾಯಿಗಳು. ಇನ್ನು ಯಾರ ಬಳಿ ಆದರೂ ಕೇವಲ 10-20 ರೂಪಾಯಿ ಇದ್ದರೆ 10-20 ರೂಪಾಯಿಗೆ ಆಹಾರ ನೀಡಲಾಗುತ್ತದೆ. ಇನ್ನು ಕೈಯಲ್ಲಿ ಏನೂ ಇಲ್ಲದಿದ್ದರೆ ಅವರಿಗೆ ಉಚಿತ ಆಹಾರ.

bachuda dhaba
image indiatimes

ರೊಟ್ಟಿ-ದಾಲ್-ಅಕ್ಕಿ, ಪಾಪಾಡ್ ಮತ್ತು ಮಜ್ಜಿಗೆಯ ಆಹಾರ ಬಚ್ಚು ಡಾಬಾದಲ್ಲಿ ನೀಡಲಾಗುತ್ತದೆ. ಬಡ ಜನರು ಧಾಬಾದ ಸುತ್ತಲೂ ವಾಸಿಸುತ್ತಿದ್ದು ಅವರು ಇಲ್ಲಿ ಬಂದು ಹೊಟ್ಟೆ ತುಂಬಾ ಉಣ್ಣುತ್ತಾರೆ. ಯಾರೂ ಹಸಿವಿನಿಂದ ಇರಬಾರದು ಎಂದು ಬಾಚು ದಾದಾ ಬಯಸುತ್ತಾರೆ. ಅವರ ಪತ್ನಿ 10 ತಿಂಗಳ ಹಿಂದೆ ನಿಧನರಾದರು. ಈ ಮೊದಲು ಇಬ್ಬರೂ ಈ ಧಾಬಾವನ್ನು ನಡೆಸುತ್ತಿದ್ದರು. ಈಗ ಅವನು ಒಬ್ಬಂಟಿ ಮತ್ತು ಅವರಿಗೆ ಓರ್ವ ಮದುವೆಯಾದ ಮಗಳು ಇದ್ದಾಳೆ. ಅವಳು ತನ್ನ ಗಂಡನ ಮನೆಯಲ್ಲಿ ವಾಸವಾಗಿದ್ದಾಳೆ.

Leave a Reply