Image : Richtopia

ಮನುಷ್ಯನಿಗೆ ಖರ್ಚು ಮಾಡಲು ಸಾಧ್ಯವಿರುವ ಭೂಮಿಯ ಅಮೂಲ್ಯವಾದ ಅನುಗ್ರಹ ಸಮಯವಾಗಿದೆ. ಅದನ್ನು ಪೋಲು ಮಾಡುವವರಿಗೆ ಅತ್ಯಮೂಲ್ಯ ವಾದ ಜೀವನವೇ ನಷ್ಟವಾಗುವುದು. ಸಮಯದ ವಿಷಯದಲ್ಲಿ ಎಲ್ಲರೂ ಸಮಾನರು. ಆದರೆ ನಮ್ಮಲ್ಲಿ ಅನೇಕರು ನಮಗೆ ಸಮಯವಿಲ್ಲಾ ಎಂದು ದೂರು ತ್ತಿರುವುದೇಕೆ? ಹಾಗಾದರೆ ಇದು ಸಮಯದ ತಪ್ಪಲ್ಲ. ಅದನ್ನು ಉಪ ಯೋಗಿಸುವವರ ತಪ್ಪು. ನಿಮಗೆ ಮಾಡಲು ಸಮಯವಿಲ್ಲದ ಕೆಲಸವನ್ನು ಅತ್ಯಂತ ನಿಬಿಡತೆಯಲ್ಲಿರುವ ವ್ಯಕ್ತಿಗೆ ನೀಡಿ ನೋಡಿ. ಅವರು ಅದನ್ನು ಎಷ್ಟೊಂದು ಚೆನ್ನಾಗಿ ಮುಗಿಸುತ್ತಾರೆ. ನಾವು ಕೆಲವರ ಕುರಿತು ಹೇಳುವುದಿದೆ. ಅಷ್ಟೆಲ್ಲಾ ಕೆಲಸವನ್ನು ಅವರು ಯಾವ ರೀತಿ ನಿಭಾಯಿಸುತ್ತಾರೆ ಎಂದು. ಅದು ಹೇಗೆ ಸಾಧ್ಯವಾಗುತ್ತದೆ ಎಂದು ಯೋಚಿಸುವಾಗ ಕೆಲಸದಲ್ಲಿ ಶಿಸ್ತು ಎದ್ದು ಗೋಚರಿಸುತ್ತದೆ. ಆದ್ದರಿಂದ ಕೆಲಸದಲ್ಲಿ ನಿಷ್ಠೆ ಮತ್ತು ಶಿಸ್ತು ಅತ್ಯಗತ್ಯವೆಂದು ಮನವರಿಕೆಯಾಗುತ್ತದೆ. ನಾವು ನೆನಪಿನಲ್ಲಿರಿಸಬೇಕಾದ, ಪಾಲಿಸ ಬೇಕಾದ ಕೆಲವು ವಿಧಾನಗಳು…

1. ಸಮಯ ಹಾಳಾಗುವುದನ್ನು ತಡೆಯಲು ನಾವು ಮಾಡಬೇಕಾದ ಮೊದಲನೆಯ ಕಾರ್ಯವೇನೆಂದರೆ ಪ್ರತಿ ದಿನವೂ ಮಾಡಬೇಕಾದ ಕೆಲಸದ ಪಟ್ಟಿ ತಯಾರಿಸುವುದು. ಅದನ್ನು ಮೊದಲ ದಿನ ರಾತ್ರಿ ತಯಾರಿಸುವುದು ಒಳ್ಳೆಯದು. ಅದನ್ನು ಯಾವಾಗಲೂ ಗಮನಿಸು ತ್ತಿರಬೇಕು. ಮುಖ್ಯವಾಗಿ ಮಾಡಬೇಕಾದ ಕೆಲಸಕ್ಕೆ ಮೊದಲ ಆದ್ಯತೆ ನೀಡಬೇಕು. ಸಮಾನ ಆದ್ಯತೆ ಬರುವ ಕೆಲಸಗಳನ್ನು ಒಟ್ಟಿಗೆ ಮಾಡಿದರೆ ಸಮಯ ಲಾಭ ವಾಗುವುದು. ಒಂದೊಂದು ಕೆಲಸಕ್ಕೆ ಬೇಕಾದ ಸಮಯವನ್ನು ಬರೆದಿಡಬೇಕು. ಆ ಪಟ್ಟಿಯಂತೆ ಕೆಲಸ ನಿರ್ವಹಿಸಲು ಮುತುವರ್ಜಿ ವಹಿಸಬೇಕು.

2. ಡೆಡ್‍ಲೈನ್‍ನ ಕುರಿತು ಯಾವಾ ಗಲೂ ಪ್ರಜ್ಞೆಯಿರಬೇಕು. ಕೆಲಸ ಪೂರ್ತಿ ಯಾಗುವುದೆಂದು ತೀರ್ಮಾನಿಸಿದ ಸಮಯದಲ್ಲೇ ಮುಗಿಸಲು ಯತ್ನಿಸಬೇಕು. ಇಲ್ಲದಿದ್ದರೆ ನಂತರದ ಕೆಲಸಗಳಿಗೆ ಸಮಯ ಸಾಲುವುದಿಲ್ಲ.

3. ಮಾಡಲು ಸಾಧ್ಯವಿಲ್ಲ ಎಂದು ತೋರುವ ಕೆಲಸಗಳನ್ನು ವಹಿಸಿಕೊಳ್ಳ ಬಾರದು. ವಿನಯದಿಂದ ಸಾಧ್ಯವಿಲ್ಲ ವೆಂದು ಹೇಳಬೇಕು. ಪೂರ್ತಿಗೊಳಿಸಲು ಅಸಾಧ್ಯವಾದ ಕೆಲಸಗಳನ್ನು ವಹಿಸಿ ಕೊಳ್ಳುವುದರಿಂದ ನಮಗೆ ಮಾತ್ರವಲ್ಲ, ನಮಗೆ ವಹಿಸಿಕೊಟ್ಟವರಿಗೂ ಕಿರಿಕಿರಿ ಯೆನಿಸುವುದು.

4. ಒಂದು ಕೆಲಸಕ್ಕೆ ನಾವು ನಿಶ್ಚಯಿಸಿದ ಸಮಯಕ್ಕಿಂತ ಕಾಲುಗಂಟೆ ಮೊದಲೇ ಆ ಕೆಲಸ ಮುಗಿಯುವಂತೆ ಶೆಡ್ಯೂಲ್ ತಯಾರಿಸಬೇಕು. ಅನಿರೀಕ್ಷಿತವಾಗಿ ಉಂಟಾಗುವ ತಡೆಯನ್ನು ದಾಟಿ ಸಮಯ ನಿಷ್ಠೆ ಪಾಲಿಸಲು ಇದು ಅಗತ್ಯ. ಪರೀಕ್ಷೆಗೆ ಕಲಿಯುವಾಗ ಕೊನೆಯ ಗಳಿಗೆಯಲ್ಲಿ ಪೂರ್ತಿಗೊಳಿಸಬಹುದೆಂದು ತೀರ್ಮಾನಿಸ ಬಾರದು. ಆದಷ್ಟು ಬೇಗನೇ ಮುಗಿಸುವಂತೆ ಪಟ್ಟಿಯನ್ನು ರೂಪಿಸಬೇಕು.

5. ನಮ್ಮ ಎದುರುಗಡೆ ಯಾವಾಗಲೂ ಒಂದು ಗಡಿಯಾರ ಇರಬೇಕು. ಆಫೀಸ್ ನಲ್ಲಾದರೂ ಮನೆಯಲ್ಲಾದರೂ ಸರಿ. ಮಕ್ಕಳಿಗೆ ಹಾಗೂ ಉದ್ಯೋಗಸ್ಥರಿಗೆ ಇದು ತುಂಬಾ ಉಪಕಾರಿ. ಬೇರೆ ಕಾರ್ಯಗಳಿಗೆ ಗಮನಹರಿಯದಂತೆ ಸಮಯ ಕ್ರಮ ತಪ್ಪದಿರಲು ಇದು ಸಹಾಯ ಮಾಡುತ್ತದೆ.

6. ಕೆಲಸದ ಪಟ್ಟಿಯನ್ನು ಒಮ್ಮೆಯೂ ಪೂರ್ತಿ ಓದಬಾರದು. ಒಂದೊಂದು ಕೆಲಸ ಮಾಡಿ ಮುಗಿಸಿದ ಬಳಿಕವೇ ನೋಡಬೇಕು. ಇಲ್ಲದಿದ್ದರೆ ಅಯ್ಯೋ ಇಷ್ಟೆಲ್ಲಾ ಕೆಲಸ ಮುಗಿಯುವುದು ಹೇಗಪ್ಪಾ ಅನಿಸಿಬಿಡುತ್ತದೆ.

7. ಮಾಡಬೇಕಾದ ಕೆಲಸದಿಂದ ಗಮನವನ್ನು ತಪ್ಪಿಸುವ ಫೇಸ್‍ಬುಕ್, ಎಸ್.ಎಂ.ಎಸ್. ಈಮೇಲ್, ವಾಟ್ಸ್‍ಆ್ಯಪ್, ಟಿ.ವಿ.ಗಳಿಗಾಗಿ ಪ್ರತ್ಯೇಕ ಸಮಯ ಮೀಸಲಿಡಿ. ಇಲ್ಲದಿದ್ದರೆ ಅದರಿಂದ ಸಮಯ ಹೋದದ್ದೇ ತಿಳಿಯುವುದಿಲ್ಲ. ಕೆಲಸದ ನಿರಂತರತೆಯೂ ಹೋಗುತ್ತದೆ. ಅಗತ್ಯದ ಕೆಲಸವೂ ಉಳಿದು ಹೋಗುತ್ತದೆ. ಅತ್ಯಗತ್ಯದ ಕೆಲಸ ಮಾಡುತ್ತಿರುವಾಗ ಫೋನ್ ಕರೆಯನ್ನು ನಿಶ್ಶಬ್ಧಗೊಳಿಸುವುದೋ ಅಥವಾ ಕರೆ ಮಾಡಿದವರಿಗೆ ನಿಮ್ಮ ನಿಬಿಡತೆಯನ್ನು ಹೇಳುವುದು ಅಗತ್ಯ.

8. ಪರಿಪೂರ್ಣತೆಗಾಗಿ ನಮ್ಮ ಆಶೆ (ಪರ್‍ಫೆಕ್ಷನಿಝಂ) ಒಳ್ಳೆಯದೆ. ಆದರೆ ಅದು ಮೇರೆ ಮೀರಿದರೆ ಕಷ್ಟ. ಸಣ್ಣಪುಟ್ಟ ವಿಚಾರಗಳಿಗೆ ಹೆಚ್ಚು ಗಮನ ನೀಡಿ ಅದೇ ಚಿಂತೆಯನ್ನು ಮನಸ್ಸಿಗೆ ಹಚ್ಚಿ ಕೊಂಡರೆ ನಮ್ಮ ನಿರೀಕ್ಷೆ ಎಲ್ಲಾ ಬುಡ ಮೇಲಾಗುವುದು.

Leave a Reply