1. ಪ್ರೀತಿ ಎಲ್ಲ ವಿಧದ ಕಾಯಿಲೆಗಳಿಗೂ ಮದ್ದು ಆದರೆ ಅದು ನಿಸ್ವಾರ್ಥ ಮತ್ತು
ನಿಷ್ಕಲ್ಮಶವಾಗಿರಬೇಕಷ್ಟೆ. (ಮಹಾತ್ಮಾಗಾಂಧಿ)

2. ಸ್ನೇಹಕ್ಕೆ ಮಾತ್ರ ದ್ವೇಷವನ್ನು ನಾಶ ಪಡಿಸುವ ಶಕ್ತಿ ಇರುವುದು. ಆದ್ದರಿಂದ ಸ್ನೇಹ
ಇದ್ದೆಡೆ ಶಾಂತಿ ಮತ್ತು ನೆಮ್ಮದಿ ಇದ್ದೇ ಇರುತ್ತದೆ. (ಗೌತಮ ಬುದ್ಧ)

3. ಮಹಿಳೆಯರ ಕ್ಷಮಾ ಗುಣದಿಂದ ಪುರುಷ ಸಾಕಷ್ಟು ಕಲಿಯುತ್ತಾನೆ. ಅದೇ ಮಹಿಳೆಯ
ಶಕ್ತಿ ಕೂಡ ಆಗಿರುತ್ತದೆ. (ಲುಯಿಸ್ ವೈಸ್)

Image result for enlightenment

4. ಮಾಡುತ್ತೇನೆಂಬ ಛಲ ಮನಸ್ಸಿನಲ್ಲಿದ್ದರೆ. ಎಲ್ಲಾ ಕಾರಣಗಳೂ ಬಾಗಿಲಾಚೆ ನಿಂತು
ಕೊಂಡಿರುತ್ತದೆ. (ಜೋಸ್ ಬಲ್ಲಿಂಗ್ಸ್)

5. ಸೋಲಿಗೆ ಹೆದರಿ ಪ್ರಯತ್ನಗಳನ್ನೇ ಕೈ ಬಿಡುವುದು ದೌರ್ಬಲ್ಯ ಮತ್ತು ಪ್ರಯತ್ನಿಸುವುದೇ
ಸಾಫಲ್ಯ. (ಥಾಮಸ್ ಅಲ್ವಾ ಎಡಿಸನ್)

6. ತ್ಯಾಗದಿಂದ ದೊರೆಯುವ ಆನಂದವು ಅವರ್ಣನೀಯ ಅದನ್ನು ಯಾರೂ ನಮ್ಮಿಂದ
ಕಿತ್ತು ಕೊಳ್ಳಲಾರರು. (ಸ್ವಾಮಿ ವಿವೇಕಾನಂದ)

7. ಅಸೂಯೆ ಮನಸ್ಸಿನಲ್ಲಿರುವ ಪ್ರಬಲ ಶತ್ರು. ಅದನ್ನು ಮೊದಲು ಕಿತ್ತೊಗೆಯಬೇಕು.
(ಬರ್ಟೆಂಡ್ ರಸೆಲ್)

8. ಸಂರಕ್ಷಣೆಯ ವಾಗ್ದಾನ ನೀಡಲಾಗಿರುವ ಓರ್ವ ಮುಸ್ಲಿಮೇತರನನ್ನು ಕೊಂದವನು
ಸ್ವರ್ಗದ ಸುವಾಸನೆಯನ್ನು ಅನುಭವಿಸಲಾರನು. (ಪ್ರವಾದಿ ಮುಹಮ್ಮದ್(ಸ)

Leave a Reply