ಇದು ನಮ್ಮ ಊರು: ಜಗತ್ತಿನಲ್ಲಿ ಎಂತೆಂತಹ ವಿಚಿತ್ರ ವ್ಯಕ್ತಿಗಳೆಲ್ಲ ಇದ್ದಾರೆ ಅನ್ನೋದಕ್ಕೆ ಈ ಒಂದು ಸ್ಟೋರಿಯೇ ಸಾಕ್ಷಿ. ಇಲ್ಲೊಬ್ಬ ವ್ಯಕ್ತಿ ಕೂದಲು ಕಟ್ ಮಾಡಿದ್ರೆ ತನ್ನ ಸಾವು ಸಂಭವಿಸುತ್ತೆ ಅಂತ 80 ವರ್ಷ ಕೂದಲು ಕತ್ತರಿಸದೆ ಹಾಗೆ ಬಿಟ್ಟಿದ್ದಾನೆ. ಹೌದು, ವಿಯೆಟ್ನಾಂನ 92 ವರ್ಷ ವಯಸ್ಸಿನ ಯೇನ್ ವ್ಯಾನ್ ಚಿಯೆನ್ ಅವರ ಕೂದಲು ಇದೀಗ 5 ಮೀಟರ್ ಬೆಳೆದಿದೆ. ವಿಯೆಟ್ನಾಂನ ಹೋ-ಚಿ ಮಿನ್ ನಗರದಿಂದ 80 ಕಿ.ಮೀ ದೂರದಲ್ಲಿರುವ ಹಳ್ಳಿಯಲ್ಲಿ ವಾಸಿಸುವ ಈ ವ್ಯಕ್ತಿ, ಮನುಷ್ಯ ತನ್ನ ಜನ್ಮ ಪಕೃತಿ ಯೊಂದಿಗೆ ಯಾವುದೇ ಬದಲಾವಣೆ ಮಾಡಲು ಹೋಗ ಬಾರದು ಅದು ಅವನಿಗೆ ಆಪತ್ತು ಎಂದು ಹೇಳುತ್ತಾರೆ.

ನಾನು ನನ್ನ ಕೂದಲನ್ನು ಕತ್ತರಿಸಿದರೆ ಖಂಡಿತ ನಾನು ಸಾಯುತ್ತೇನೆ. ಕೂದಲು ಕತ್ತರಿಸದೆ ಇದ್ದುದ್ದಕೆ ನನಗೆ ಇಷ್ಟು ವರ್ಷ ಬದುಕಲು ಸಾಧ್ಯವಾಯಿತು ಎಂದು ಯೇನ್ ವ್ಯಾನ್ ಚಿಯೆನ್ ಹೇಳುತ್ತಾರೆ. ಸ್ಕಾರ್ಫ್ ಧರಿಸಿ ತನ್ನ ಕೂದಲನ್ನು ಮುಚ್ಚುವ ಇವರು ತಮ್ಮ ಕೂದಲಿಗೆ ಬಾಚಣಿಕೆ ಕೂಡ ಹಾಕಲ್ವಂತೆ! ಕೂದಲು ಬೆಳೆಯುವುದು ದೇವರ ಅನುಗ್ರಹ ಎಂದು ಅವರು ನಂಬುತ್ತಾರೆ.

Leave a Reply