ವಿಜಯಪುರ: ಪುಟ್ಟ ಮಕ್ಕಳ ಬಗ್ಗೆ ಎಷ್ಟು ಜಾಗ್ರತೆ ವಹಿಸಿದರೂ ಸಾಲದು. ಇಲ್ಲಿನ ತಿಕೋಟಾ ಪಟ್ಟಣದಲ್ಲಿ ಒಂಭತ್ತು ತಿಂಗಳ ಮಗುವೊಂದು ಸುಣ್ಣದ ಡಬ್ಬಿಯನ್ನು ನುಂಗಿ ಸಾವಿಗೀಡಾದ ದಾರುಣ ಘಟನೆ ನಡೆದಿದೆ.

ವಿಶ್ವನಾಥ ತಾಳಿಕೋಟಿ ಎಂಬವರ ಒಂಭತ್ತು ತಿಂಗಳ ಮಗು ಮನೆಯಲ್ಲಿ ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಸುಣ್ಣದ ಡಬ್ಬಿಯನ್ನು ನುಂಗಿದ್ದು, ಇದನ್ನು ಗಮನಿಸಿದ ಪೋಷಕರು ಮಗುವನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ಕೂಡಲೇ ಚಿಕಿತ್ಸೆ ನೀಡಿದ ವೈದ್ಯರು ಸುಣ್ಣದ ಡಬ್ಬಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರೂ ಸುಣ್ಣದ ಡಬ್ಬಿಯಲ್ಲಿದ್ದ ಸುಣ್ಣವು ಮಗುವಿನ ದೇಹವನ್ನು ಸೇರಿದ್ದರಿಂದ ಮಗು ಮೃತಪಟ್ಟಿದ್ದಾಗಿ ವೈದ್ಯರು ಹೇಳಿದ್ದಾರೆ.

ಈ ಸಂಬಂಧ ತಿಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುಟ್ಟ ಮಕ್ಕಳು ಓಡಾಡುವಲ್ಲಿ ಇಂತಹ ಅಪಾಯಕಾರಿ ವಸ್ತುಗಳನ್ನು ಇಡದಂತೆ ಪೋಷಕರು ಜಾಗ್ರತೆ ವಹಿಸಬೇಕು.

Leave a Reply