ಗುಜರಾತಿನ ಸೂರತ್ ನಲ್ಲಿನ ಕೋಚಿಂಗ್ ಸೆಂಟರ್ನ ಬೆಂಕಿ ಅವಘಡದ ಬಳಿಕ ಅಧಿಕಾರಿಗಳು ಕಟ್ಟಡಗಳ ಪರಿಶೀಲನೆ ನಡೆಸಲು ಪ್ರಾರಂಭಿಸಿದ್ದು, ಸುಮಾರು 9,395 ಕಟ್ಟಡಗಳು ಅಸುರಕ್ಷಿತವೆಂದು ಕಂಡು ಬಂದಿದೆ.
ಸೂರತ್ ಕೋಚಿಂಗ್ ಸೆಂಟರ್ ಬೆಂಕಿ ಅವಘಡದ ಬಳಿಕ ಶೀಘ್ರ ಗತಿಯಲ್ಲಿ ತಪಾಸಣೆ ನಡೆಸುತ್ತಿದ್ದು, ಶಾಲೆಗಳು , ಕೋಚಿಂಗ್ ಕೇಂದ್ರಗಳು, ಮಾಲ್ಗಳು, ರೆಸ್ಟಾರೆಂಟ್ಗಳು ಮತ್ತು ಹೋಟೆಲುಗಳು ಸೇರಿದಂತೆ ಗುಜರಾತಿನ ಸುಮಾರು 9,962 ಕಟ್ಟಡಗಳ ಪರಿಶೀಲನೆ ನಡೆಸಲಾಗಿದ್ದು, ಅದರಲ್ಲಿ 9,395 ಕಟ್ಟಡಗಳು ಅಗ್ನಿಶಾಮಕ ಸುರಕ್ಷತೆ ನಿಯಂತ್ರಣದಲ್ಲಿ ಇಲ್ಲ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಜಗದೀಪ್ ನಾರಾಯಣ್ ಸಿಂಗ್ ಹೇಳಿದ್ದಾರೆ. ರಾಜ್ಯದಾದ್ಯಂತ 162 ಪುರಸಭೆಗಳ ಅಧಿಕಾರಿಗಳು ಕಟ್ಟಡಗಳನ್ನು ಪರಿಶೀಲಿಸಿದ್ದಾರೆ ಎಂದು ಸಿಂಗ್ ಹೇಳಿದರು.

ಈ ದುರಂತದಲ್ಲಿ ಸುಮಾರು 20  ಮಂದಿ ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಜೀವ ಉಳಿಸಿ ಕೊಳ್ಳುವುದಕ್ಕೋಸ್ಕರ ಕೆಲವು ವಿದ್ಯಾರ್ಥಿಗಳು ನಾಲ್ಕು ಮಹಡಿಯ ಕಟ್ಟಡದಿಂದ ಜಿಗಿದಿದ್ದಾರೆ ಎಂದು ತಿಳಿದು ಬಂದಿದೆ. ಮಕ್ಕಳು ಸುಮಾರು 14  ರಿಂದ 17  ವಯಸ್ಸಿನ ಆಸು ಪಾಸಿನವರಾಗಿದ್ದು, ಕೆಲವು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೊಂದು ಕಮರ್ಷಿಯಲ್ ಬಿಲ್ಡಿಂಗ್ ಎಂದು ಹೇಳಲಾಗಿದ್ದು, ಮಕ್ಕಳು ಜೀವ ವುಳಿಸಲು ಹಾರಿದ ಪರಿಣಾಮವಾಗಿ ಕೆಲವರ ಜೀವ ಹೋಗಿದೆ ಎಂದು ವರದಿ ತಿಳಿಸಿದೆ. ಈ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

Leave a Reply