ಮಲಪ್ಪುರಂ: ಆರನೇ ತರಗತಿಯಲ್ಲಿ ಕಲಿಯುತ್ತಿರುವ ಅಥೇನಾ ಎಂಬ ಬಾಲಕಿ ತನ್ನ ತಲೆ ಕೂದಲನ್ನು ಶೇವ್ ಮಾಡಿ ಕಾನ್ಸರ್ ರೋಗಿಗಳಿಗೆ ನೀಡುವ ಮೂಲಕ ಬಹು ದೊಡ್ಡ ಮಾನವೀಯತೆಯ ಸಂದೇಶವನ್ನು ನೀಡಿದ್ದಾಳೆ. ಈ ಉದಾತ್ತ ಕಾರಣಕ್ಕಾಗಿ ತನ್ನ ಕೂದಲನ್ನು ಕ್ಷೌರ ಮಾಡಲು ಅವಳು ಹಿಂಜರಿಯಲಿಲ್ಲ. ದಯೆ ಮತ್ತು ಪ್ರೀತಿಯ ಸಂಕೇತವಾಗಿ ತನ್ನ ಕೂದಲನ್ನು ಶೇವ್ ಮಾಡಿದ್ದರಿಂದ ತನಗೆ ತುಂಬಾ ಖುಷಿಯಾಗಿದೆ ಮತ್ತು ಮನ ಸಂತೃಪ್ತಿ ಸಿಕ್ಕಿದೆ ಎಂದು ಅಥೆನಾ ಹೇಳಿದ್ದಾಳೆ.

ಯಾರದಲೂ ಹೆಣ್ಣು ಮಕ್ಕಳು ತಲೆ ಕೂದಲು ಶೇವ್ ಮಾಡಿದರೆ ಕೆಲವೊಮ್ಮೆ ಅಪಹಾಸ್ಯಕ್ಕೆ ಈಡಾಗುತ್ತಾರೆ. ಆದರೆ ಈಗ ಯಾರೂ ಅವಳನ್ನು ಅಪಹಾಸ್ಯ ಮಾಡುವುದಿಲ್ಲ,ಬದಲಾಗಿ ಹಿಂದಿರುವ ಕಾರಣವನ್ನು ಕೇಳಿ ತುಂಬಾ ಗೌರವ ನೀಡುತ್ತಾರೆ. ಅಥೆನಾ ತೀರು ಅಲಥಿಯೂರ್ ಮೂಲದ ಅಶೋಕನ್ ಮತ್ತು ಸಿ.ಕೆ.ಬಿಂದು ಅವರ ಪುತ್ರಿ. ಅಶೋಕನ್ ತಿರುವೂರಿನ ಜವಳಿ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಅಥೆನಾ ತಿರುನವಾಯ ನವಮುಕುಂದ ಪ್ರೌಢ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಓದುತ್ತಿದ್ದಾಳೆ.

“ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡಲು ತನ್ನ ಮಗಳು ಹೀಗೆ ಮಾಡಿದ್ದಾಳೆ. ಈ ಕುರಿತು ನನಗೆ ತುಂಬಾ ಸಂತೋಷವಾಗಿದೆ” ಎಂದು ಅಥೇನಾ ಅವರ ತಂದೆ ಅಶೋಕನ್ ಹೇಳಿದರು.

“ನನ್ನ ಸಹೋದರ ಅಭಿನವ್ ಅವರೊಂದಿಗೆ ಯೂಟ್ಯೂಬ್ ವಿಡಿಯೋ ನೋಡುವಾಗ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡುವ ಬಗ್ಗೆ ತಿಳಿದುಕೊಂಡೆ. ನಂತರ, ನಾನು ನನ್ನ ಬಯಕೆಯನ್ನು ನನ್ನ ಹೆತ್ತವರೊಂದಿಗೆ ಹಂಚಿಕೊಂಡೆ. ಅವರು ಕೂದಲು ದಾನಕ್ಕೆ ನನಗೆ ಅನುಮತಿ ನೀಡಿದರು. ಮಿರಾಕಲ್ ಚಾರಿಟೇಬಲ್ ಅಸೋಸಿಯೇಶನ್‌ನಡಿಯಲ್ಲಿ ನಾನು ನನ್ನ ಕೂದಲನ್ನು ಹೇರ್ ಬ್ಯಾಂಕ್‌ಗೆ ದಾನ ಮಾಡಿದ್ದೇನೆ ”ಎಂದು ಅವಳು ಹೇಳಿದಳು. ತ್ರಿಶೂರ್ ಮೂಲದ ಹೇರ್ ಬ್ಯಾಂಕ್ ಪ್ರತಿನಿಧಿಗಳು ಕೂದಲನ್ನು ಸಂಗ್ರಹಿಸಲು ಅಥೇನಾ ಅವರ ಮನೆಗೆ ತಲುಪಿದರು.

 

Leave a Reply