ಇದುನಮ್ಮಊರು: ಮಕ್ಕಳು ಏನು ಮಾಡಿದರೂ ಅದನ್ನು ನೋಡಲು ತುಂಬಾ ಖುಷಿಯಾಗುತ್ತದೆ. ಅವರ ಮುಗ್ದ ನಡೆ, ನೋಟ ಎಲ್ಲವೂ ಒಂಥರಾ ಥ್ರಿಲ್ ಆಗಿರುತ್ತದೆ.  ಸೋಶಿಯಲ್ ಮಾಧ್ಯಮದಲ್ಲಿ ಸಣ್ಣ ಮಗುವಿನ ವಿಡಿಯೋ ವೈರಲ್ ಆಗಿದ್ದು, ಆ ಮಗು ಭಾರತೀಯ ಯೋಧರಿಗೆ ಸೆಲ್ಯೂಟ್ ಹೊಡೆಯುತ್ತಿದೆ.

ಮಗು ಸೆಲ್ಯೂಟ್ ಹೊಡೆಯುವ ಶೈಲಿ ತುಂಬಾ ಸುಂದರವಾಗಿದೆ. ಲೇಹ್‌ನ ರಸ್ತೆಬದಿಯಲ್ಲಿ ನಿಂತಿದ್ದ ಸಣ್ಣ ಮಗು ಹಾದುಹೋಗುವ ಜವಾನ್‌ಗಳಿಗೆ ಸೆಲ್ಯೂಟ್ ಹೊಡೆಯುತ್ತದೆ. ಆಗ ಅವರು ಮಗುವಿಗೆ ಹೇಗೆ ಸೆಲ್ಯೂಟ್ ಹೊಡೆಯಬೇಕು ಎಂದು ಕಲಿಸಿ ಕೊಡುತ್ತಾರೆ. ಐಎಫ್‌ಎಸ್ ಅಧಿಕಾರಿ ಸುಧಾ ರಾಮನ್ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

“ಭವಿಷ್ಯದ ಭಾರತದ ಉದಯೋನ್ಮುಖ ಸೈನಿಕ … ಲೇಹ್‌ನ ಹಳ್ಳಿಯೊಂದರಿಂದ ಈ ಹುಡುಗನಿಂದ ಇಂದಿನ ದಿನ ಸಾರ್ಥಕವಾಯಿತು ಎಂದು ಬರೆದಿದ್ದಾರೆ.

Leave a Reply