ಜೋನ್‍ಪುರಿ: ಉತ್ತರ ಪ್ರದೇಶದ ಜೋನ್‍ಪುರಿಯಲ್ಲಿ ಕಳೆದ 15 ದಿವಸಗಳಲ್ಲಿ ಕ್ರೈಸ್ತರ ವಿರುದ್ಧ 12 ದಾಳಿಗಳು ನಡೆದಿವೆ. ಸ್ಥಳೀಯ ತೀವ್ರ ಹಿಂದುತ್ವವಾದಿ ಸಂಘಟನೆಗಳು ದಾಳಿಯ ಹಿಂದಿವೆ ಮತ್ತು ಸ್ಥಳೀಯ ಪೊಲೀಸರು ಈ ಸಂಘಟನೆಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ದಿಲ್ಲಿ ಅಲ್ಪಸಂಖ್ಯಾತರ ಆಯೋಗದ ಮಾಜಿ ಸದಸ್ಯ ಎ.ಸಿ. ಮೈಕಲ್ ಆರೋಪಿಸಿದ್ದಾರೆ.
ಜೋನ್‍ಪುರಿಯ ಜನಸಂಖ್ಯೆಯಲ್ಲಿ ಕ್ರೈಸ್ತರು ಕೇವಲ 0.11 ಶೇಕಡದಷ್ಟಿದ್ದು ಇವರ ವಿರುದ್ಧ ಸಂಘಟಿತ ದಾಳಿ ನಡೆಯುತ್ತಿದೆ ಎಂದು ದಿಲ್ಲಿ ಅಲ್ಪಸಂಖ್ಯಾತರ ಆಯೋಗದ ಮಾಜಿ ಸದಸ್ಯ ಎ.ಸಿ. ಮೈಕಲ್ ಹೇಳಿದ್ದಾರೆ.
ಬಲವಂತದ ಮತಾಂತರ ಆರೋಪ ಹೊರಿಸಿ ಸ್ಥಳೀಯ ಚರ್ಚಿನ ಪಾದ್ರಿಯವರನ್ನು ಮಧ್ಯರಾತ್ರೆಯ ವೇಳೆ ಬಂಧಿಸಲಾಗಿದ್ದು, ತದನಂತರ ಇಲ್ಲಿ ಕೆಲವು ದಿವಸಗಳಿಂದೀಚೆಗೆ ಚರ್ಚ್‍ಗೆ ಹೋಗುವ ದಾರಿಗೆ ಅಡ್ಡಿ ಪಡಿಸಿದ ಘಟನೆಯು ನಡೆಯುತ್ತಿದೆ. ಬಲವಂತದ ಮತಾಂತರ ನಡೆಸುತ್ತಿದ್ದಾರೆ ಎಂದು ಹಿಂದುತ್ವವಾದಿ ಸಂಘಟನೆಗಳು ಕ್ರೈಸ್ತರ ವಿರುದ್ಧ ಆರೋಪಿಸುತ್ತಿದ್ದು ಇದಕ್ಕೆ ಪೂರಕವಾಗಿ ಝೀನ್ಯೂಸ್ ಚ್ಯಾನೆಲ್ ಮತ್ತು ದೈನಿಕ ಜಾಗರಣ ಪತ್ರಿಕೆ ಸತ್ಯಕ್ಕೆ ದೂರವಾದ ವರದಿ ಪ್ರಕಟಿಸುತ್ತಿದೆ ಎಂದು ಕ್ರೈಸ್ತ ಪ್ರತಿನಿಧಿಗಳು ಆರೋಪಿಸಿದ್ದಾರೆ.
ಜೋನ್ ಪುರಿ ಪ್ರಧಾನಿ ನರೇಂದ್ರ ಮೋದಿಯ ಸ್ವಕ್ಷೇತ್ರ ವಾರಣಾಸಿಯಿಂದ ಒಂದೂವರೆಗ ಗಂಟೆ ದೂರದಲ್ಲಿದ್ದು ಇಲ್ಲಿ ಸಪ್ಟೆಂಬರ್ 5 ರಿಂದ 24ನೆ ತಾರೀಕಿನರವರೆಗೆ 12 ದಾಳಿ ಘಟನೆಗಳು ಕ್ರೈಸ್ತರ ವಿರುದ್ಧ ನಡೆದಿದೆ.