ಬ್ರಿಟನ್ ನಲ್ಲಿ ಸಲಿಂಗಕಾಮಿ ತಂದೆ ತನ್ನ ಮಗಳ ಮಾಜಿ ಗೆಳೆಯನ ಜೊತೆ ಸಲಿಂಕಾಮದ ಸಂಬಂಧ ಬೆಳೆಸಿ ಇದೀಗ ಸುದ್ದಿಯಾಗಿದ್ದಾರೆ. ತಂದೆ ತನ್ನ ಮಗಳು ಮತ್ತು ಅವಳ ಗೆಳೆಯನೊಂದಿಗೆ ರಜಾದಿನಕ್ಕೆ ಹೋಗಿದ್ದಾಗ ಅಲ್ಲಿ ತಂದೆಗೆ ತನ್ನ ಮಗಳ ಗೆಳೆಯನ ಮೇಲೆ ಪ್ರೇಮಾಂಕುರವಾಗಿತ್ತಂತೆ. 50 ವರ್ಷದ ಬ್ಯಾರಿ ಡ್ರೂಟ್ ಬಾರ್ಲೋ ಬ್ರಿಟನ್‌ನ ಅಧಿಕೃತವಾಗಿ ನೋಂದಾಯಿತ ಸಲಿಂಗಕಾಮಿ ತಂದೆ. ಮ್ಯಾಂಚೆಸ್ಟರ್ ನಿವಾಸಿಯಾದ ಬ್ಯಾರಿ ಹಾಲ್ ಇತ್ತೀಚೆಗೆ ತನ್ನ ಸಲಿಂಗ ಕಾಮಿ ಸ್ಕಾಟ್ ಹಚಿನ್ಸನ್ (25) ಎಂಬಾತನೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಾನೆ. ಸ್ಕಾಟ್ ಕೆಲವು ತಿಂಗಳ ಹಿಂದೆ ಬ್ಯಾರಿಯ 20 ವರ್ಷದ ಮಗಳೊಂದಿಗೆ ಡೇಟಿಂಗ್ ಮಾಡುತ್ತಿದ್ದ.

ಕಳೆದ ವಾರ ಬ್ಯಾರಿ ತಾನು ಈಗ ಸ್ಕಾಟ್ ಜೊತೆ ಸಂಬಂಧ ಹೊಂದಿರುವುದಾಗಿ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬಹಿರಂಗಪಡಿಸಿದ್ದಾರೆ. ರಜಾದಿನಗಳಲ್ಲಿ ಆತ ತನ್ನ ಮಗಳು ಮತ್ತು ಅವರ ಮಾಜಿ ಗೆಳೆಯರೊಂದಿಗೆ ತಮ್ಮ ಪ್ರೇಮ ಪ್ರಸ್ತಾಪದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕ್ರೊಯೇಷಿಯಾದ ದ್ವೀಪದ ಮನೆಯೊಂದರ ಬಳಿ ಮೋಟಾರು ವಿಹಾರ ನೌಕೆಯಲ್ಲಿ ವಿಡಿಯೋ ಮಾಡಲಾಗಿದೆ. ಬ್ಯಾರಿ ಸ್ಕಾಟ್‌ಗೆ ಪ್ರೇಮ ಪ್ರಸ್ತಾಪಿಸುವ ಮೊದಲು ನೌಕೆಯನ್ನು ಮೇಣದ ಬತ್ತಿಗಳು ಮತ್ತು ಗುಲಾಬಿ ಎಲೆಗಳಿಂದ ಅಲಂಕರಿಸಿದ್ದರು ಮತ್ತು ಷಾಂಪೇನ್‌ನೊಂದಿಗೆ ಮಧುರ ಕ್ಷಣವನ್ನು ಆಚರಿಸಿದರು. ಇದರ ನಂತರ ಬ್ಯಾರಿ ಸ್ಕಾಟ್‌ಗೆ ವಜ್ರ-ಬೆಳ್ಳಿಯ ಉಂಗುರವನ್ನು ಉಡುಗೊರೆಯಾಗಿ ನೀಡಿದರು. ಇದರ ನಂತರ ಬ್ಯಾರಿಯ ಮಗಳು ಸ್ಕಾಟ್ ನೊಂದಿಗೆ ಎಲ್ಲಾ ಸಂಬಂಧವನ್ನು ಕಡಿದುಕೊಂಡಿದ್ದಾಳೆ ಎನ್ನಲಾಗಿದೆ.

Leave a Reply