ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಮಾರುಕಟ್ಟೆಯಲ್ಲಿ ಮಹಿಳೆಯೊಬ್ಬರು ಇಬ್ಬರು ಯುವತಿಯರ ಮೇಲೆ ಹಲ್ಲೆ ಮಾಡುತ್ತಿರುವುದು ಕಾಣಬಹುದು. ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆ ಯುಪಿಯ ಎಟಾದ ಮಾರುಕಟ್ಟೆಯಲ್ಲಿ ನಡೆದಿದ್ದು , ಕಾರ್ವಾಚೌತ್ ಹಬ್ಬಕ್ಕಾಗಿ ಶಾಪಿಂಗ್ ಮಾಡುವಾಗ, ಮಹಿಳೆಯರ ನಡುವೆ ಗಲಾಟೆ ನಡೆದಿದೆ.

ವರದಿಯ ಪ್ರಕಾರ, ಯುವತಿ 40 ವರ್ಷದ ಮಹಿಳೆಯನ್ನು ಆಂಟಿ ಎಂದು ಕರೆದದ್ದೇ ಈ ಹಲ್ಲೆಗೆ ಕಾರಣ. ಕೋಪಗೊಂಡ ಮಹಿಳೆ ಅವರ ಮೇಲೆ ಹಲ್ಲೆ ಮಾಡಲು ತೊಡಗಿದರು.

ಮಾತ್ರವಲ್ಲ ಆ ಮಹಿಳೆಯ ಜೊತೆ ಇತರ ಮಹಿಳೆಯರೂ ಸೇರಿ ಗಲಾಟೆ ಮಾಡುತ್ತಿರುವುದನ್ನು ಕಾಣಬಹುದು. ಬಳಿಕ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಬಂದು ಇಬ್ಬರನ್ನೂ ತಡೆಯುತ್ತಾರೆ. ಈ ಹಲ್ಲೆಗೆ ಕಾರಣ ಏನೆಂದು ಕೇಳಿದಾಗ , ಆಂಟಿ ಕರೆದುದಕ್ಕೆ ಕೋಪಗೊಂಡು ಹಲ್ಲೆ ಮಾಡಲಾಗಿದೆ ಎಂದು ಯುವತಿ ಹೇಳಿದ್ದಾಳೆ.

Leave a Reply