ಇದು ನಮ್ಮ ಊರು: ಇದು ಕೇಳಲು ವಿಚಿತ್ರವಾಗಿದೆಯಾದರು ಇದು ನಿಜ. ಇದು ವಿಜ್ಞಾನದ ಪವಾಡವಾಗಿದೆ. ಮಹಿಳೆ 74 ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನೆಲ್ಲಪತಿರಿಪಾಡು ನಿವಾಸಿಯಾಗಿರುವ ಮಂಗಯಮ್ಮ ಅವರೇ ಅವಳಿ ಮಕ್ಕಳಿಗೆ ಜನುಮ ನೀಡಿ ಸುದ್ದಿಯಾದ ಮಹಿಳೆ. ಮಂಗಯಮ್ಮ ಮತ್ತು ವೈ ರಾಜ ರಾವ್ ದಂಪತಿಗೆ ಮದುವೆಯಾಗಿ 54 ವರ್ಷಗಳು ಕಳೆದಿದ್ದರೂ ಕೂಡ ದಂಪತಿಗಳಿಗೆ ಮಕ್ಕಳಿರಲಿಲ್ಲ. ಕೊನೆಗೆ ಅಂತಿಮವಾಗಿ ದಂಪತಿಗಳು ಐವಿಎಫ್ ಅನ್ನು ಆಶ್ರಯಿಸಿ ಮಕ್ಕಳನ್ನು ಪಡೆದಿದ್ದಾರೆ.

ಈ ದಂಪತಿಗೆ ಮಕ್ಕಳನ್ನು ಪಡೆಯಲು ಗುಂಟೂರಿನ ನರ್ಸಿಂಗ್ ಹೋಂ ಒಂದರ ಐವಿಎಫ್ ತಜ್ಞರು ಸಹಾಯ ಮಾಡಿದ್ದಾರೆ. ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಒಂದು ಆಧುನಿಕ ತಂತ್ರಜ್ಞಾನವಾಗಿದ್ದು, ಇದರ ಮೂಲಕ ಮಂಗಯಮ್ಮ ಗರ್ಭ ಧರಿಸಿದ್ದಾರೆ ಎನ್ನಲಾಗಿದೆ. ಶಸ್ತ್ರಚಿಕಿತ್ಸೆಯಾ ಮೂಲಕ ಮಕ್ಕಳನ್ನು ಹೊರತೆಗೆಯಲಾಗಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಡಾ.ಉಮಾಶಂಕರ್ ಹೇಳಿದ್ದಾರೆ.

Leave a Reply