ಬೆಳಗಾವಿ: ಭಾರತ್ ಬಂದ್ ನಡುವೆ ಒಂದು ವಿಶೇಷ ಪ್ರಸಂಗ ನಡೆದಿದೆ. ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಬೆಳಗಾವಿಯಲ್ಲಿ ಆಪ್ ಪಕ್ಷ ಪ್ರತಿಭಟನೆ ಹಮ್ಮಿಗೊಂಡಿತ್ತು. ಈ ವೇಳೆ ಆಪ್ ಕಾರ್ಯಕರ್ತನೊಬ್ಬ ಪೆಟ್ರೋಲ್ ಬೆಲೆ ಇಳಿಸಬೇಕು ಎಂದು ಹೇಳುವ ಬದಲು ತಪ್ಪಾಗಿ ಪೆಟ್ರೋಲ್ ಏರಿಸಬೇಕು ಎಂದು ಘೋಷಣೆ ಕೂಗಿದ. ಈ ಸಂದರ್ಭದಲ್ಲಿ ಕೋಪಗೊಂಡ ಆಪ್ ಮುಖಂಡ ಆ ಕಾರ್ಯಕರ್ತನಿಗೆ ಮುಖಂಡರೊಬ್ಬರು ಕಪಾಳಮೋಕ್ಷ ಮಾಡಿದ್ದು, ಆ ವಿಡಿಯೋ ವೈರಲ್ ಆಗಿದೆ.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಈ ಪ್ರತಿಭಟನೆ ನಡೆಸಲಾಗಿತ್ತು. ತನ್ನ ಕಾರ್ಯಕರ್ತನಿಗೆ ಆಪ್ ಮುಖಂಡ ಸದಾನಂದ್ ಬಾಮನೆ ಸ್ವತಃ ಕಪಾಲ ಮೋಕ್ಷ ಮಾಡಿದ್ದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಇಂದು ದೇಶಾದ್ಯಂತ ತೈಲ ಬೆಲೆ ಏರಿಕೆ ವಿರುದ್ಧ ವಿವಿಧ ಕಡೆಗಳಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿದ್ದು, ಬೆಳಗಾವಿಯಲ್ಲೂ ಬಂದ್ ಗೆ ಕರೆ ನೀಡಲಾಗಿತ್ತು. ವಿಡಿಯೋ ನೋಡಿ …….

Leave a Reply