ತಿರುವನಂತಪುರಂ: ವಿಹಾರ ನೌಕೆ ಪತನಗೊಂಡು ಸಮುದ್ರದಲ್ಲಿ ಸಿಕ್ಕಿಬಿದ್ದ ಅಭಿಲಾಷ್ ಟೋಮಿಯನ್ನು ರಕ್ಷಿಸಲಾಗಿದೆ. ಫ್ರಂಚ್ ಮೀನುಗಾರಿಕಾ ನಿರೀಕ್ಷಣಾ ಹಡುಗು ಒಸೀರಿಸ್ ಅಭಿಲಾಷ್‍ರನ್ನು ರಕ್ಷಿಸಿದೆ. ಫ್ರೆಂಚ್ ಹಡಗು ಅಭಿಲಾಷ್‍ಗೆ ತುರ್ತು ಚಿಕಿತ್ಸೆ ನೀಡಲಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅಭಿಲಾಷ್‍ರನ್ನು ಆಮ್ಸರಡಂಗೆ ಕರೆದೊಯ್ಯಲಾಗುವುದು.

ವಿಹಾರ ನೌಕೆಯ ಹಾಯಿ ಕಟ್ಟಿದ್ದ ಕಂಭ ಅಭಿಲಾಷ್‍ರ ದೇಹಕ್ಕೆ ಮುರಿದು ಬಿದ್ದಿತ್ತು. ಆದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದ್ದರಿಂದ ಫ್ರೆಂಚ್ ಹಡಗಿನಲ್ಲಿಯೇ ವೈದ್ಯರು ಅಭಿಲಾಷ್‍ರಿಗೆ ಚಿಕಿತ್ಸೆ ನೀಡಲಿದ್ದಾರೆ.

ಜೂನ್ ಒಂದರಂದು ಫ್ರಾನ್ಸ್‍ನಿಂದ ವಿಹಾರ ನೌಕೆಯಲ್ಲಿಹೊರಟಿದ್ದ ಅಭಿಲಾಷ್ ಕಳೆದ 84 ದಿವಸಗಳಿಂದ ಸಮುದ್ರ ಪ್ರಯಾಣದಲ್ಲಿದ್ದಾರೆ.

Leave a Reply