ಬಿಜು ಅಬ್ರಹಾಂ ರವರು ಕೇರಳದ ಮಲ್ಲಪಲ್ಲಿಯಲ್ಲಿ ಸುಂದರವಾದ ಮನೆಯನ್ನು ಕಟ್ಟಿದ್ದಾರೆ. ಇಟ್ಟಿಗೆ ಹಂಚುಗಳಿಂದ ಈ ಮನೆ ಸುಂದರವಾಗಿ ನಿರ್ಮಾಣವಾಗಿದೆ. ಕೇರಳದ ಸಾಂಪ್ರದಾಯಿಕ ಮನೆಯ ಲುಕ್ ಈ ಕಟ್ಟಡಕ್ಕಿದೆ. ಬಿಜು ಅವರ ಮನೆಯು 12,000 ಚದರ ಅಡಿಗಳನ್ನು ಹೊಂದಿದ್ದು, ಈ ಮನೆಯನ್ನು ಕಟ್ಟುವಲ್ಲಿ ಅವರು ಒಂದೇ ಒಂದು ಮರವನ್ನು ಕಡಿದಿಲ್ಲ. ಪರಿಸರಕ್ಕೆ ಹಾನಿಯಾಗದಂತೆ ಬಹಳ ಯಶಸ್ವಿಯಾಗಿ ಅವರು ಈ ಮನೆ ಕಟ್ಟಿಕೊಂಡಿದ್ದಾರೆ.

ತನ್ನ ವೃದ್ಧ ತಂದೆ ತಾಯಿಯ ಆರೈಕೆಗಾಗಿ ಬಿಜು ರವರು ಮಲ್ಲಪಲ್ಲಿಗೆ ಮರಳಿದರು. ತನ್ನ ಹೆತ್ತವರ ಮೇಲೆ ಕಾಳಜಿ ವಹಿಸಿ ಅವರನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಸೂಕ್ತವಾದ ಮನೆಯನ್ನು ನಿರ್ಮಾಣ ಮಾಡಿದ್ದಾರೆ. ಭಾರತದಲ್ಲಿ 1886ರ ಸುಮಾರಿಗೆ ಸಿಮೆಂಟ್ ಬಳಸಲು ತೊಡಗಿದರು. ಅದಕ್ಕಿಂತ ಮೊದಲು ನಾವು ಮಣ್ಣಿನಿಂದ ನೈಸರ್ಗಿಕವಾಗಿ ಮನೆಗಳನ್ನು ಕಟ್ಟುತ್ತಿದ್ದೆವು. ನೈಸರ್ಗಿಕ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸುತ್ತೇವೆ. ಈ ವಿಧಾನವನ್ನೂ ನಾನು ಮನೆ ಕಟ್ಟುವಾಗ ಬಳಸಿದೆ ಎಂದು ಬಿಜು ಅಬ್ರಹಾಂ ಹೇಳುತ್ತಾರೆ.

courtesy : thebetterindia

ವಿಶೇಷವಾಗಿ ದಕ್ಷಿಣ ಭಾರತದ ಮನೆಗಳನ್ನು ರಚಿಸಲು ಹಳ್ಳಿಗಳಲ್ಲಿ ಬಳಸಿದ ತಂತ್ರಗಳನ್ನು ಗಮನಿಸಿದ ಬಿಜು ರವರು, ಸಾಂಪ್ರದಾಯಿಕ ಹೆಂಚು, ಛಾವಣಿಯಿಂದ ಹಿಡಿದು ಗೋಡೆಗಳನ್ನು ನಿರ್ಮಿಸಲು ಬಳಸುವ ಇಟ್ಟಿಗೆಗಳವರೆಗೆ ತನ್ನ ಮನೆ ನಿರ್ಮಾಣದಲ್ಲಿ ಬಳಸಿದ್ದಾರೆ. ಅಬ್ರಹಾಂ ಹರಾಜಿನ ಮೂಲಕ ನೆಲಸಮ ಮಾಡಲಾದ ಮನೆಯನ್ನು ಖರೀದಿಸಿ ಅದರ ವಸ್ತುಗಳನ್ನು ಬಳಸಿದರು. ನಾವು ಭೂಮಿಗೆ ಗೌರವ ಸಲ್ಲಿಸಲು ಬಯಸಿದ್ದೆವು, ಆದ್ದರಿಂದ ಇಂಥ ಮನೆ ಕಟ್ಟಲು ಸಾಧ್ಯವಾಯಿತು ಎಂದು ಬಿಜು ಹೇಳುತ್ತಾರೆ.

ಒಂದೇ ಒಂದು ಮರವನ್ನು ಕಡಿಯದೆ, ಒಂದೇ ಕಲ್ಲನ್ನು ಹೊರತೆಗೆಯದೆ ನಾನು ಇಂದು ನನ್ನ ಮನೆಯನ್ನು ನಿರ್ಮಿಸಿದೆ. ಯುವಕರು ಹಳ್ಳಿಯ ಸೌಂದರ್ಯ ಪ್ರಕೃತಿಯ ಸೊಬಗನ್ನು ಮಹತ್ವವನ್ನು ನಿಧಾನವಾಗಿ ಅರಿತುಕೊಳ್ಳಲು ತೊಡಗಿದ್ದಾರೆ ಎಂದು ನನಗನಿಸುತ್ತದೆ. ನನ್ನಲ್ಲಿರುವ ಇದೇ ತತ್ವವನ್ನು ಬಳಸಿ ಈಗಾಗಲೇ 6-8 ಮನೆಗಳನ್ನು ನಿರ್ಮಿಸುತ್ತಿದ್ದೇನೆ ಎಂದು ಬಿಜು ಹೇಳುತ್ತಾರೆ.

 

LEAVE A REPLY

Please enter your comment!
Please enter your name here