ಇದು ನಮ ಊರು: ಅದ್ರಷ್ಟ ಕೈ ಕೊಟ್ಟರೆ ಏನೆಲ್ಲಾ ಆಗುತ್ತೆ ನೋಡಿ. ಇಲ್ಲೊಬ್ಬ ಭೂಪ ಮೋಟಾರ್ ಮೆಕಾನಿಕ್ ತನ್ನ ಗರ್ಲ್ ಫ್ರೆಂಡ್ ಅದು ಕೂಡ ಒಬ್ಬಳಲ್ಲ ಇಬ್ಬರು ಗರ್ಲ್ ಫ್ರೆಂಡ್ ಗಳನ್ನು ಮರ್ಸಿಡಿಸ್‌ನಲ್ಲಿ ನಲ್ಲಿ ಡೇಟ್ ಗೆ ಕರೆದೊಯ್ದು ಪಜೀತಿ ತಂದಿಟ್ಟಿದ್ದಾನೆ. ವಿಷಯ ಏನಪ್ಪಾ ಅಂದ್ರೆ! ದೆಹಲಿಯ ಸೀಲಾಂಪುರದಲ್ಲಿ ಮೋಟಾರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿ ಯೊಬ್ಬ ತನ್ನ ಗ್ರಾಹಕರೊಬ್ಬರ ಮರ್ಸಿಡಿಸ್‌ನಲ್ಲಿ ತನ್ನ ಇಬ್ಬರು ಗೆಳತಿಯರನ್ನು ಡೇಟ್ ಗೆ ಕರೆದೊಯ್ದ ಆಗ್ನೇಯ ದೆಹಲಿಯ ಸರಾಯ್ ಕೇಲ್ ಖಾನ್ ಪ್ರದೇಶದಲ್ಲಿ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದದ್ದೂ ಅಲ್ಲದೆ ಮೂವರು ಪಾದಕಾರಿಗಳನ್ನು ಕೂಡ ಗಾಯ ಗೊಳಿಸಿದ್ದಾನೆ.

ಈ ಮರ್ಸಿಡಿಸ್ ತನ್ನ ಗ್ರಾಹಕರೊಬ್ಬರಿಗೆ ಸೇರಿದ್ದು ಅದನ್ನು ದುರಸ್ತಿಗಾಗಿ ಕಾರ್ಯಾಗಾರದಲ್ಲಿ ಇಡಲಾಗಿತ್ತು ಎಂದು ಕಿಡಿಗೇಡಿ ಚಾಲಕ ಬಾಯಿ ಬಿಟ್ಟಿದ್ದಾನೆ. ಅಪಘಾತದ ಸಮಯದಲ್ಲಿ ಅತಿ ವೇಗದಲ್ಲಿ ಕಾರನ್ನು ಓಡಿಸುತ್ತಿದ್ದ ಮತ್ತು ಚಳಕ ಕುಡಿದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದೀಗ ಚಾಲಕನ ವಿರುದ್ಧ ಮರ್ಸಿಡಿಸ್ ನ ಮಾಲಕರು ದೂರು ದಾಖಲಿಸಿದ್ದು, ಅದಲ್ಲದೆ ಅಪಘಾತ ಕುಡಿತದ ಚಾಲನೆ ಸೇರಿದಂತೆ ಹಲವಾರು ಪ್ರಕರಣ ದಾಖಲಾಗಿದೆ.

Leave a Reply