ನವದೆಹಲಿ: ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿ ಮತ್ತು ಮಾವೋವಾದಿಗಳ ಸಂಪರ್ಕದ ಆರೋಪದ ಮೇಲೆ ಬಹು-ನಗರಗಳಲ್ಲಿ ಪೊಲೀಸ್ ನಡೆಸಿದ ದಾಳಿಗಳಲ್ಲಿ ಐವರು ಮಾನವ ಹಕ್ಕು ಕಾರ್ಯಕರ್ತರ ವಿವಾದಾತ್ಮಕ ಬಂಧನಗಳನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್ ಕೇಳಲಿದೆ. ಪುಣೆ ಪೋಲಿಸರ ಈ ಕ್ರಮವು ಭಾರೀ ವಿವಾದವನ್ನು ಉಂಟುಮಾಡಿದೆ.

ಇತಿಹಾಸಕಾರ ರೊಮಿಲಾ ಥಾಪರ್ ಮತ್ತು ಇತರ ನಾಲ್ಕು ಹಕ್ಕುಗಳ ಕಾರ್ಯಕರ್ತರು – ಬಂಧನವನ್ನು ತಡೆಹಿಡಿಯಬೇಕು ಮತ್ತು ಸ್ವತಂತ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಬಂಧಿತರಾಗಿರುವ ಮಾವೋವಾದಿ ಸಿದ್ಧಾಂತದ ಲೇಖಕ ವರವರ ರಾವ್, ವಕೀಲ ಸುಧಾ ಭರದ್ವಾಜ್, ಅರುಣ್ ಫೆರೀರಾ, ಗೌತಮ್ ನವ್ಲಾಖಾ ಮತ್ತು ವೆರ್ನಾನ್ ಗೊನ್ಸಾಲ್ವ್ಸ್ ಇದ್ದು ಅವರ ಧ್ವನಿಯನ್ನು ದಮನಿಸುವ ನಿಟ್ಟಿನಲ್ಲಿ ಈ ಬಂಧನ ನಡೆದಿದೆ ಎಂದು ಆರೋಪಿಸಲಾಗಿದೆ ಎಂದು ಏನ್ ಡಿ ಟಿವಿ ವರದಿ ಮಾಡಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ದೀಪಕ್ ಮಿಶ್ರ ಇಂದು ಮಧ್ಯಾರ್ಹ್ನ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದಾರೆ.

Leave a Reply