ಹೈದರಾಬಾದ್: ತೆಲಂಗಾಣದ ಖಾಜಿಪಲ್ಲಿ ನಗರ ಬ್ಲಾಕ್‌ನಲ್ಲಿ 1650 ಎಕರೆ ಅರಣ್ಯ ಭೂಮಿಯನ್ನು ತೆಲುಗು ಚಿತ್ರ ರಂಗದ ಬಾಹುಬಲಿ ರೆಬೆಲ್ ಸ್ಟಾರ್ ಪ್ರಭಾಸ್ ಸೋಮವಾರ ದತ್ತು ಪಡೆದಿದ್ದಾರೆ. ರಾಜ್ಯಸಭಾ ಸಂಸತ್ ಸದಸ್ಯ ಜೋಗಿನಪಲ್ಲಿ ಸಂತೋಷ್ ಕುಮಾರ್ ಮತ್ತು ಅರಣ್ಯ ಸಚಿವ ಇಂದ್ರಕರನ್ ರೆಡ್ಡಿ ಅವರ ಆಶ್ರಯದಲ್ಲಿ ದತ್ತು ಕಾರ್ಯಕ್ರಮ ನಡೆಯಿತು. ಇಲ್ಲಿ ಇಕೋ ಪಾರ್ಕ್ ನಿರ್ಮಿಸಲು ನಟ ಪ್ರಭಾಸ್ ಎರಡು ಕೋಟಿ ರೂಪಾಯಿ ಖರ್ಚು ಮಾಡುವುದಾಗಿ ಘೋಷಿಸಿದ್ದಾರೆ. ಪ್ರಭಾಸ್ ಅವರ ತಂದೆ ಯು.ವಿ.ಎಸ್. ರಾಜು ಅವರ ನೆನಪಿಗಾಗಿ ಈ ಯೋಜನೆಗೆ ಅವರದೇ ಹೆಸರಿಡಲಾಗುವುದು ಎಂದು ಪ್ರಭಾಸ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭಾ ಸಂಸತ್ ಸದಸ್ಯ ಜೋಗಿನಪಲ್ಲಿ ಸಂತೋಷ್ ಕುಮಾರ್ ತೆಲಂಗಾಣ ರಾಜ್ಯದಲ್ಲಿ ಕ್ಷೀಣಿಸುತ್ತಿರುವ ಅರಣ್ಯ ಗಳನ್ನು ಸಂರಕ್ಷಿಸಲು ಇನ್ನಷ್ಟು ಕಲಾವಿದರು ಮುಂದಾಗಬೇಕು ಹಸಿರೇ ನಮ್ಮ ಉಸಿರಾಗಬೇಕು. ಸೆಲೆಬ್ರಿಟಿಗಳು ಈ ಕಾರ್ಯಕ್ಕೆ ಮುಂದಾದರೆ ಸಾಮಾನ್ಯ ಜನರು ಅನುಸರಿಸುತ್ತಾರೆ ಈ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಇನ್ನೂ ಕೆಲವು ನಟರನ್ನು ಇಂತಹ ಉತ್ತಮ ಕಾರ್ಯಕ್ಕಾಗಿ ಪ್ರೇರೇಪಿಸುವುದಾಗಿ ಹೇಳಿದರು.

LEAVE A REPLY

Please enter your comment!
Please enter your name here