ಪ್ಲಾಸ್ತಿಕ್ ಆಟಿಕೆ ಬಾಯಿಗೆ ಹಾಕಿದ ಮಗು ಅದನ್ನು ನುಂಗಿ ಕೊನೆಗೆ ಮೃತಪಟ್ಟ ಘಟನೆ ಮುಂಬೈಯಿಂದ ವರದಿಯಾಗಿದೆ. ಕಿರುತೆರೆ ನಟ ಪ್ರತಿಷ್ ವೋರಾ ಎನ್ನುವವರ ಎರಡು ವರ್ಷದ ಮಗು ಆಟಿಕೆ ನುಂಗಿದ್ದು, ಮಗು ಆಟಿಕೆಯೊಂದಿಗೆ ಆಟವಾಡುತ್ತಿತ್ತು.
ಆಗ ಬೊಂಬೆಯ ತುಂಡನ್ನು ಬಾಯಿಗೆ ಹಾಕಿದ್ದು, ಅದು ಬಾಯಿಯಲ್ಲಿ ಸಿಕ್ಕಿ ಹಾಕಿ ಮೃತ ಪಟ್ಟಿದ್ದಾಳೆ ಎಂದು ದುಃಖಿತ ಮಗುವಿನ ತಂದೆ ಪ್ರತಿಷ್ ಅಳಲು ತೋಡಿಕೊಂಡಿದ್ದಾರೆ.
ಈ ಕಿರುತೆರೆ ನಟ ಪ್ಯಾರ್ ಕೆ ಪಾಪಡ್ ಎನ್ನುವ ಟಿವಿ ಶೋನಲ್ಲಿ ಖ್ಯಾತಿಯನ್ನು ಹೊಂದಿದ್ದಾರೆ.
cuteness overloaded ಎಂದು ಬರೆದು ಇನ್ಸ್ಟಾಗ್ರಾಮ್ ನಲ್ಲಿ ಮಗುವಿನ ಫೋಟೋ ಶೇರ್ ಮಾಡಿದ್ದಾರೆ. ಬೆಳ್ಳಬೆಳಗ್ಗೆ ಮಗುವಿನ ಮೃತದೇಹದ ಅಂತ್ಯ ಸಂಸ್ಕಾರ ನೆರವೇರಿಸಲು ದಂಪತಿಗಳು ರಾಜ್ ಕೋಟ್ ಗೆ ಫ್ಲೈಟ್ ಮೂಲಕ ಹೋಗಿದ್ದಾರೆ ಎಂದು ವರದಿ ತಿಳಿಸಿದೆ.
https://www.instagram.com/p/BvjalUPHbeJ/?utm_source=ig_web_copy_link