ಪ್ಯಾನ್ ಕಾರ್ಡ್, ಮೊಬೈಲ್ ನಂಬ್ರ, ಬ್ಯಾಂಕ್ ಖಾತೆಗಳನ್ನು ಆಧಾರ್ ಲಿಂಕ್ ಮಾಡುವ ಬಗ್ಗೆ ಭಾರೀ ಪ್ರತಿಭಟನೆಯು ಕಂಡುಬಂದಿದೆ. ಆದರೆ ಅಧಿಕಾರಿಗಳು ಇದರಲ್ಲಿ ದೋಷಗಳನ್ನು ಮಾಡಿ ಜನರನ್ನು ಇನ್ನಷ್ಟು ಸಮಸ್ಯೆ ಸೃಷ್ಟಿಸುತ್ತಿದ್ದಾರೆ.
ಮಧ್ಯಪ್ರದೇಶದ ಒಂದು ಸಣ್ಣ ಪಟ್ಟಣದಲ್ಲಿ, ತಾಂತ್ರಿಕ ದೋಷದ ಕಾರಣದಿಂದ ಐದು ಹಳ್ಳಿಗಳ 5,000 ಕ್ಕಿಂತ ಹೆಚ್ಚಿನ ಜನರು
ತಮ್ಮ ಆಧಾರ್ ಕಾರ್ಡ್ನಲ್ಲಿ ಒಂದೇ ಹುಟ್ಟಿದ ದಿನಾಂಕವನ್ನು ಹೊಂದಿದ್ದಾರೆ. ಮಧ್ಯ ಪ್ರದೇಶದ ನೀಮಚ್ನಲ್ಲಿರುವ ಪಾಲ್ಸೊಡಾ, ದೇವಪುರಾ, ಫತಹ್ ನಗರ, ಜೆಟ್ಪುರಿಯಾ ಮತ್ತು ಭೋಪಾಲ್ಗಂಜ್ ಗ್ರಾಮಗಳಲ್ಲಿ ಸುಮಾರು 80% ನಷ್ಟು ಜನರ ಹುಟ್ಟಿದ ಜನವರಿ 1 ಎಂದು ದಾಖಲಾಗಿದೆ. ಆ ಹಳ್ಳಿಗಳಲ್ಲಿ ಸುಮಾರು 7,000 ಜನಸಂಖ್ಯೆ ಇದೆ.
ಈ ತಾಂತ್ರಿಕ ದೋಷದ ಕಾರಣದಿಂದ ಅನೇಕ ಜನರಿಗೆ ಅರ್ಹತೆ ಹೊಂದಿದ್ದರೂ ಸರ್ಕಾರದ ಯೋಜನೆಗಳನ್ನು ನಿರಾಕರಿಸಲಾಗಿದೆ. ತಮ್ಮ ಇತರ ದಾಖಲೆಗಳು ಮತ್ತು ಆಧಾರ್ ಕಾರ್ಡುಗಳ ವಿವರ ಒಂದಕ್ಕೊಂದು ಹೊಂದಾಣಿಕೆ ಆಗುವುದಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ತಮ್ಮ ನಿಜವಾದ ಜನ್ಮದಿನ ಗೊತ್ತಿಲ್ಲದ ಜನರಿಗಾಗಿ ಸ್ವಯಂಚಾಲಿತವಾಗಿ ಜನವರಿ 1 ರಂದು ಪಟ್ಟಿ ಮಾಡುವ ರೀತಿಯಲ್ಲಿ ಆಧಾರ್ ತಂತ್ರಾಂಶವನ್ನು ವಿನ್ಯಾಸಗೊಳಿಸಲಾಗಿದೆ. ತಿದ್ದುಪಡಿ ಮಾಡಲು 5-10 ದಿನಗಳವರೆಗೆ ತೆಗೆದುಕೊಳ್ಳುತ್ತದೆ.