ಗಾಂಧಿನಗರ(ಗುಜರಾತ್): ಕಳ್ಳರ ಧೈರ್ಯ ಎಂತಹದ್ದು ನೋಡಿ. ಅವರು ಸಿಕ್ಕಿಬೀಳುವ ಹೆದರಿಕೆಯನ್ನೂ ಇಟ್ಟುಕೊಂಡಿಲ್ಲ. ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುವ ವೀಡಿಯೊದಲ್ಲಿ ಕಳ್ಳತನ ಮಾಡಿದ ಬಳಿಕ ಸಿಸಿಟಿವಿ ಮುಂದೆ ಮುಸುಕು ಹಾಕಿ ಕುಣಿಯುತ್ತಿರುವುದು ಕಂಡು ಬಂದಿದೆ.

ಗುಜರಾತ್ನ್ ಸರಗಾಸನ್ ಗ್ರಾಮದಲ್ಲಿ ಕೆಲವು ಮಂದಿ ಕಳ್ಳರು ಒಂದು ಕಟ್ಟಡದೊಳಗೆ ನುಸುಳುತ್ತಿರುವುದು ಕಂಡು ಬರುತ್ತಿದೆ. ಅಲ್ಲಿರುವ ಸಿಸಿಟಿವಿಯಲ್ಲಿ ಎಲ್ಲ ದೃಶ್ಯಗಳು ದಾಖಲಾಗಿವೆ. ಕಳ್ಳತನ ಮಾಡಿ ಕಟ್ಟಡದಿಂದ ಹೊರ ಬರುವಾಗ ಇಬ್ಬರು ಮುಸುಕು ಹಾಕಿಕೊಂಡು ಸಿಸಿಟಿವಿ ಮುಂದೆ ಕುಣಿದು ಕುಪ್ಪಳಿಸಿದರು. ಈ ಘಟನೆಯ ಕುರಿತು ಪೊಲೀಸರು ಯಾವುದೇ ಪ್ರತಿಕ್ರಿಯೆ ಸದ್ಯ ನೀಡಿಲ್ಲ.

Leave a Reply