ಮುಂಬೈ: ಏರ್‍ಇಂಡಿಯ ವಿಮಾನದಿಂದ ಮಹಿಳಾ ಸಿಬ್ಬಂದಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೋಮವಾರ ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ. ಕೆಳಗೆ ಬಿದ್ದು ಗಾಯಗೊಂಡ ಹರ್ಷಾ ಲೋಬೊರನ್ನು ನಾನಾವತಿ ಆಸ್ಪತ್ರೆಗೆ ಸೇರಿಸಲಾಗಿದೆ.

ಏರ್ ಇಂಡಿಯದ ಎಐ 864 ಬೋಯಿಂಗ್ ವಿಮಾನದಲ್ಲಿ ಘಟನೆ ನಡೆದಿದ್ದು ಟೇಕ್ ಆಫ್‍ ಗಿಂತ ಸ್ವಲ್ಪ ಮೊದಲು ಎಲ್ 5 ಬಾಗಿಲು ತೆರೆದು ಸ್ಟೆಪ್ ಲೇಡರ್ ಖಚಿತ ಪಡಿಸುತ್ತಿದ್ದಾಗ ಅವರು ಕೆಳಗೆ ಬಿದ್ದರು. ಕಾಲು ಎಡವಿ ಹರ್ಷಾ ಕೆಳಗೆ ಬಿದ್ದರು ಎಂದು ವರದಿಗಳು ತಿಳಿಸಿವೆ. 30 ಅಡಿ ಎತ್ತರದಿಂದ ಅವರು ಬಿದ್ದಿದ್ದಾರೆ.

ಘಟನೆಯ ಕುರಿತು ಏರ್ ಇಂಡಿಯ ಇನ್ನೂ ಅಧಿಕೃತ ಪ್ರಕಟನೆಯನ್ನು ನೀಡಿಲ್ಲ.

Leave a Reply