ಬ್ರಿಸ್ಟಲ್: ಲ್ಯಾಂಡಿಂಗ್‍ಗೆ ಸಿದ್ಧವಾಗುತ್ತಿದ್ದಾಗ ಅತಿ ರಭಸದಿಂದ ಬೀಸಿದ ಗಾಳಿಗೆ ಸಿಲುಕಿ ವಿಮಾನ ಓಲಾಡಿದೆ. ಕೊನೆಗೆ ಪೈಲಟ್ ಸಾಹಸಿಕತೆ ಮೆರೆದು ವಿಮಾನವನ್ನು ಲ್ಯಾಂಡಿಂಗ್ ಮಾಡಲು ಯಶಸ್ವಿಯಾಗಿದ್ದಾರೆ. ವಿಮಾನ ಲ್ಯಾಂಡ್ ಮಾಡುತ್ತಿರುವ ವೀಡಿಯೊ ಇಂಟರ್ ನೆಟ್‍ನಲ್ಲಿ ವೈರಲ್ ಆಗಿದೆ.

ವಿರುದ್ಧ ದಿಕ್ಕಿನಿಂದ ಗಾಳಿ ಬೀಸುತ್ತಿತ್ತು. ಇದನ್ನೆಲ್ಲ ಮೀರಿ ವಿಮಾನವನ್ನು ಪೈಲಟ್ ವಿಮಾನದ ರನ್‍ವೇಯಲ್ಲಿಯೇ ಇಳಿಸಿದ್ದಾರೆ. ಆಂಗ್ಲೊ ಜರ್ಮನ್ ಟ್ರಾವಲ್ ಆಂಡ್ ಟೂರಿಸಂ ಕಂಪೆನಿಯಾದ ಟಿಯುಐಯ ಬೊಯಿಂಗ್ 757-200 ಏರ್‍ಲೈನ್ ಈ ಪ್ರತಿಕೂಲ ಹವಾಮಾನವನ್ನು ಮೀರಿ ಲ್ಯಾಂಡ್ ಆಗಿದೆ. ಬಿಸ್ಟಲ್ ಏರ್‍ಪೋರ್ಟಿನಲ್ಲಿ ವಿಮಾನ ಇಳಿಯುತ್ತಿರುವ ದೃಶ್ಯ ವೀಡಿಯೊದಲ್ಲಿದೆ.

ಪ್ರಕೃತಿ ಮತ್ತು ವೃತ್ತಿಯ ಪರಿಣತಿ ಎದುರು ಬದುರಾದಾಗ ಎನ್ನುವ ತಲೆಬರಹದಲ್ಲಿ ಹಲವರು ಈ ವೀಡಿಯೊವನ್ನು ಶೇರ್ ಮಾಡಿದ್ದಾರೆ.

Leave a Reply