ನವದೆಹಲಿ: ಹಿಜಾಬ್ ಧರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ರವರ ವಿಡಿಯೋ ವೈರಲ್ ಆಗಿದೆ. ಹೊಸದಾಗಿ ಜಾರಿಗೆ ಬಂದಿರುವ ಪೌರತ್ವ (ತಿದ್ದುಪಡಿ) ಕಾಯ್ದೆ, 2019 ರ ವಿರುದ್ಧ ಸಾವಿರಾರು ಮಂದಿ ದೆಹಲಿಯ ಜಮಾ ಮಸೀದಿಯ ಬಳಿ ಪ್ರತಿಭಟನೆಯಲ್ಲಿ ಸೇರಿದ್ದು, ಈ ಸಂದರ್ಭದಲ್ಲಿ ಅಲ್ಕಾ ಹಿಜಾಬ್ ಧರಿಸಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ ವಿರುದ್ಧ ಪ್ರತಿಭಟನೆಯಲ್ಲಿ ಗುರುತಿಸಿಕೊಂಡರು. ಮಾತ್ರವಲ್ಲ ತನ್ನ ವಸ್ತ್ರ ನೋಡಿ ಗುರುತಿಸುವಂತೆ ಮೋದಿಯವರನ್ನು ಕೇಳುವ ಈ ವಿಡಿಯೋ ವೈರಲ್ ಆಗುತ್ತಿದೆ.

ಪ್ರತಿಭಟನಾಕಾರರ ಬಟ್ಟೆ ನೋಡಿ ಗುರುತಿಸಬಹುದು ಎಂದು ಮೋದಿ ಈ ಹಿಂದೆ ಹೇಳಿದ್ದು, ಆದ್ದರಿಂದ ತಾನು ಈ ವಸ್ತ್ರ ತೊಟ್ಟಿದ್ದೇನೆ. ನಮ್ಮ ಬಟ್ಟೆಗಳಿಂದ ನಮ್ಮನ್ನು ಗುರುತಿಸಿ ಮತ್ತು ನಾವು ಯಾರೆಂದು ಹೇಳಿ ಎಂದು ಸವಾಲು ಹಾಕುವುದನ್ನು ನೋಡಬಹುದು.

Leave a Reply