ಲಕ್ನೋ: ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ನಿವೃತ್ತ ಪೋಲೀಸಧಿಕಾರಿಯನ್ನು ನಡು ರಸ್ತೆಯಲ್ಲಿ ಮೂವರು ಥಳಿಸಿ ಕೊಂದ ಘಟನೆ ನಡೆದಿದೆ. 70ರ ಪ್ರಾಯದ ಅಬ್ದುಲ್ ಸಮದ್ ಖಾನ್ ಎಂಬ ಈ ನಿವೃತ್ತ ಪೋಲಿಸಧಿಕಾರಿ ಮೆಲೆ ಹಲ್ಲೆ ನಡೆಯುತ್ತಿರುವಾಗ ನಾಗರಿಕರು ನಿಂತು ನೋಡುತ್ತಿದ್ದರೇ ಹೊರತು ತಡೆಯಲು ಯಾರೂ ಮುಂದಾಗಲಿಲ್ಲ. ಈ ಘಟನೆಯ ದೃಶ್ಯಗಳು ಈಗಾಗಲೇ ವೈರಲ್ ಆಗಿದೆ.

ಸೈಕಲ್ ನಲ್ಲಿ ಪ್ರಯಾಣಿಸುತ್ತಿರುವಾಗ ಕೆಂಪು ಶರ್ಟ್ ಧರಿಸಿದ ಒರ್ವ ವ್ಯಕ್ತಿ ಬೆತ್ತದಿಂದ ಥಳಿಸುತ್ತಿದ್ದು ದೃಶ್ಯಗಳಲ್ಲಿ ಸ್ಪಷ್ಟವಾಗಿದೆ. ಸೈಕಲ್ ನಿಂದ ಬಿದ್ದ ಸಾದಿಕ್ ಹೊಡೆತದಿಂದ ತಪ್ಪಿಸಿ ಕೊಳ್ಳುವುದು ಮತ್ತು ಪಕ್ಕದ ಮನೆಗಳ ಜನರು ನೋಡಿ ಹಿಂದಿರುಗುತ್ತಿರುವ ಮತ್ತು ಮತ್ತಿಬ್ಬರು ಸೇರಿ ಹಲ್ಲೆ ನಡೆಸುವ ದೃಶ್ಯವೂ ವೀಡಿಯೋದಲ್ಲಿ ದಾಖಲಾಗಿದೆ. ಕೊನೆಗೆ ಈ ವ್ಯಕ್ತಿ ಅಶಕ್ತನಾಗಿ ಬಿದ್ದ ಬಳಿಕವೇ ದಾಳಿಕೋರು ಪಲಾಯನ ಮಾಡಿದ್ದಾರೆ.

ಈ ಘಟನೆಯ ಮುಖ್ಯ ಆರೋಪಿ ಜುನೈದ್ ಎಂದು ತಿಳಿದು ಬಂದಿದೆ. ಈತನ ವಿರುದ್ಧ ಸ್ಥಳಿಯ ಠಾಣೆಯಲ್ಲಿ ಹತ್ತು ಪೃಕರಣಗಳು ದಾಖಲಾಗಿತ್ತು. ಆಸ್ತಿ ವಿಚಾರದ ವೈಷಮ್ಯವೇ ಈ ಕೊಲೆಗೆ ಕಾರಣವೆಂದು ತನಿಖೆಯಿಂದ ಬಹಿರಂಗವಾಗಿದೆ.

Leave a Reply