ಹೊಸದಿಲ್ಲಿ, ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರನ್ನು 1984ರ ಸಿಖ್ ವಿರೋಧಿ ಗಲಭೆಗೆ ಜೋಡಿಸಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದರು. ಯಾರಾದರೂ ಮೋದಿಯನ್ನು ಗೋಧ್ರಾ ಸಾಮೂಹಿಕ ಹತ್ಯೆಗೆ ಜೋಡಿಸಿ ಮಾತಾಡಿದರೆ ಏನು ಆಗಬಹುದು ಎಂದು ಅವರು ಪ್ರಶ್ನಿಸಿದರು.
ಸಿಖ್ ಸಾಮೂಹಿಕ ಹತ್ಯೆಯ ಕುರಿತು ಆಗಿದ್ದು ಆಗಿ ಹೋಯಿತು ಎಂಬ ಸ್ಯಾಂ ಪಿತ್ರೋಡರ ಮಾತನ್ನು ಅಮರೀಂದರ್ ಸಿಂಗ್ ತಿರಸ್ಕರಿಸಿದ್ದಾರೆ.

1984ರ ಸಿಖ್ ಗಲಭೆ ದೊಡ್ಡ ದುರಂತವಾಗಿತ್ತು ಈವರೆಗೆ ಬಲಿಪಶುಗಳಿಗೆ ನ್ಯಾಯ ಸಿಕ್ಕಿಲ್ಲ. ಕೆಲವು ನಾಯಕರು ವೈಯಕ್ತಿಕವಾಗಿ ಗಲಭೆಯಲ್ಲಿ ಪಾಲ್ಗೊಂಡರೆಂಬ ಆರೋಪ ಎದ್ದಾಗ ಅವರಿಗೆ ಕಾನೂನಿನಂತ ಶಿಕ್ಷೆಯೂ ಸಿಕ್ಕಿದೆ. ಕೆಲವರ ಹೆಸರು ಕೇಳಿ ಬಂದಿವೆ. ಇದರರ್ಥ ಮೋದಿಗೆ, ರಾಜೀವ್‌ಗಾಂಧಿ ಅಥವಾ ಕಾಂಗ್ರೆಸ್‌ನ್ನು ಅದಕ್ಕೆ ಜೋಡಿಸಲು ಸಾಧ್ಯ ಎಂದಲ್ಲ. ಹಲವಾರು ಬಿಜೆಪಿ ಆರೆಸ್ಸೆಸ್ ನಾಯಕರ ಹೆಸರು ಪೊಲೀಸ್ ಎಫ್‌ಐಆರ್‌ನಲ್ಲಿ ಸೇರ್ಪಡೆಯಾಗಿದೆ. ಇದು ಮೋದಿಗೂ ಗೊತ್ತಿದೆ ಎಂದು ಅಮರೀಂದರ್ ಸಿಂಗ್ ಹೇಳಿದರು.

Leave a Reply