ಸೋನಿ ಟಿವಿಯಲ್ಲಿ ಅಮಿತಾಭ್ ಬಚ್ಚನ್ ಡಬಲ್ ರೋಲ್ ನಲ್ಲಿ ಅಭಿನಯಿಸಿದ ಸೂರ್ಯವಂಶಂ ಸಿನೆಮಾ ಆಗಾಗ ಪ್ರಸಾರ ಆಗುವುದರ ಬಗ್ಗೆ ಸಾಕಷ್ಟು ವ್ಯಂಗ್ಯಗಳು ಕೇಳಿ ಬಂದಿವೆ. ಸೋನಿ ಟಿವಿಯಲ್ಲಿ ಯಾಕೆ ಪದೇ ಪದೇ ಸೂರ್ಯವಂಶಂ ಸಿನೆಮಾ ತೋರಿಸಲಾಗುತ್ತದೆ ಎಂಬ ಬಗ್ಗೆ ಸ್ವಯಂ ಆಮಿತಾಬ್ ಬಚ್ಚನ್ ಬಹಿರಂಗ ಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅಮಿತಾಭ್ ಬಚ್ಚನ್, ಸೋನಿ ಟಿವಿ ವೀಕ್ಷಕರಿಗೆ ಸೂರ್ಯವಂಶಂ ಸಿನೆಮಾ ಬಲವಂತವಾಗಿ ತೋರಿಸಲಾಗುತ್ತದೆ ಎಂಬುದು ದೊಡ್ಡ ತಪ್ಪು ಕಲ್ಪನೆಯಾಗಿದೆ.
ವಾಸ್ತವದಲ್ಲಿ ಆ ಸಿನೆಮಾದ ಹೈ – ರೇಟಿಂಗ್ ಕಾರಣದಿಂದ ಆಯಾ ಸಿನೆಮಾವನ್ನು ಬಾರಿ ಬಾರಿ ತೋರಿಸಲಾಗುತ್ತದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಈ ಸಿನೆಮಾ 20 ವರ್ಷಗಳನ್ನು ಪೂರೈಸಿದೆ. ಸೋನಿ ಟಿವಿಯಲ್ಲಿ ಈ ಸಿನೆಮಾ ಬಾರಿ ಬಾರಿ ತೋರಿಸುವ ಬಗ್ಗೆ ಸಾಕಷ್ಟು ವ್ಯಂಗ್ಯ ವಿಮರ್ಶೆಗಳು ಕೇಳಿ ಬಂದಿವೆ.

https://twitter.com/SrBachchan/status/1130748231460110336

Leave a Reply