ವಿಶಾಖಪಟ್ಟಣ: ಆಂಧ್ರ ಪ್ರದೇಶದಲ್ಲಿ ಟಿಡಿಪಿ ಶಾಸಕ ಸಹಿತರ ಇಬ್ಬರನ್ನು ನಕಲ್ಷರು ಹತ್ಯೆ ಮಾಡಿದ್ದಾರೆ. ವಿಶಾಖಪಟ್ಟಣದ ದ್ರುಬಿಗುಂಡದಲ್ಲಿ ಘಟನೆ ನಡೆದಿದ್ದು ಪಾರ್ಟಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳುತ್ತಿದ್ದಾಗ ಶಾಸಕ ಸರ್ವೇಶ್ವರ ರಾವ್ ಮತ್ತು ಮಾಜಿ ಶಾಸಕ ಶಿವಗರಿಸೋಮರನ್ನು ಮಾವೋವಾದಿಗಳು ಗುಂಡಿಟ್ಟುಸಾಯಿಸಿದರು.

ವಿಶಾಖಪಟ್ಟಣದಿಂದ 125 ಕಿಲೊಮೀಟರ್ ದೂರದ ತುತ್ತಾಂಗಿ ಗ್ರಾಮದಲ್ಲಿ ಘಟನೆನಡೆದಿದೆ ಎಂದು ತಿಳಿದುಬಂದಿದೆ. ಪಾರ್ಟಿಯ ಕಾರ್ಯಕ್ರಮ ಮುಗಿಸಿಕೊಂಡು ಇಬ್ಬರು ಒಂದೇ ಕಾರಿನಲ್ಲಿ ಮರಳಿ ಬರುತ್ತಿದ್ದರು. ಕಾರನ್ನು ತಡೆದು ನಕ್ಸರಲು ಗುಂಡು ಹಾರಿಸಿದ್ದಾರೆ.

ಪಾಯಿಂಟ್ ಬ್ಲಾಕ್ ರೇಂಜ್‍ನಲ್ಲಿ ನಿಲ್ಲಿಸಿ ಶಾಸಕರನ್ನು ಮತ್ತು ಮಾಜಿ ಶಾಸಕರನ್ನು ಹತ್ಯೆ ಮಾಡಿದದಾರೆ. 2014ರ ಚುನಾವಣೆಯಲ್ಲಿ ಸರ್ವೇಶ್ವರ ರಾವ್ ಟಿಡಿಪಿ ಅಭ್ಯರ್ಥಿಯಾಗಿ ವಿಧಾನಸಭೆಗೆ ಚುನಾಯಿತರಾಗಿದ್ದರು. ಇವರು ನಕ್ಸಲರ ಲೀಸ್ಟ್‍ನಲ್ಲಿದ್ದ ವ್ಯಕ್ತಿ ಎನ್ನಲಾಗಿದೆ.

Leave a Reply