ಹೈದರಾಬಾದ್ ಪೊಲೀಸರು ಬುಧವಾರ ಒಂದು ಕಲ್ಮಶ ಎಣ್ಣೆ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಪ್ರಾಣಿ ಮಾಂಸ ಹಾಗೂ ಅದರ ಎಲುಬುಗಳಿಂದ ತೈಲವನ್ನು ಹೊರತೆಗೆದು ಮಾರುವ ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಪ್ರಾಣಿಗಳ ತ್ಯಾಜ್ಯವನ್ನು ಕರಗಿಸಿ ಮತ್ತು ಯಾವುದೇ ಪರವಾನಗಿಗಳಿಲ್ಲದೆ ಅಕ್ರಮವಾಗಿ ಕೊಬ್ಬಿನ ಎಣ್ಣೆಯನ್ನು ತಯಾರಿಸುತ್ತಿದ್ದರು ಮತ್ತು ಅದನ್ನು ಫಾಸ್ಟ್ ಫುಡ್ ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಲ್ಮಶ ಎಣ್ಣೆಯಿಂದ ಜಂಕ್ ಫುಡ್ ಸ್ನ್ಯಾಕ್ಸ್ ತಯಾರಿಸಲಾಗುತ್ತಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.

ಫಿನೈಲ್ ಮತ್ತು ಸೋಪ್ ಗಳನ್ನು ತಯಾರಿಸುವ ರಾಸಾಯನಿಕ ಅಂಗಡಿಗಳ ಮಾಲೀಕರಿಗೆ ಕೊಬ್ಬು ಎಣ್ಣೆಯನ್ನು ಮಾರಾಟ ಮಾಡುತ್ತಿದ್ದರು ಎಂದು ಅವರು ಹೇಳಿದರು. ಈ ಉತ್ಪನ್ನಗಳು ಸಾಂಕ್ರಾಮಿಕ ಸೋಂಕನ್ನು ಮತ್ತು ರೋಗಗಳನ್ನು ಹರಡಬಹುದು.

Leave a Reply