ದೆಹಲಿ: ರಾಜಸ್ತಾನ, ಮಧ್ಯ ಪ್ರದೇಶ, ಚತ್ತೀಸ್ ಗಡ್, ಮಿಝೋರಮ್ ಮತ್ತು ತೆಲಂಗಾಣ ಎಂಬೀ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.

ಚತ್ತೀಸ್ ಘಡದಲ್ಲಿ ಎರಡು ಹಂತಗಳಲ್ಲಿ ಉಳಿದ ಎಲ್ಲಾ ಕಡೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಎಲ್ಲಾ ರಾಜ್ಯಗಳ ಚುನಾವಣಾ ಫಲಿತಾಂಶವು ಡಿ. 11ರಂದು ಪ್ರಕಟವಾಗಲಿದೆ. ಚತ್ತೀಸ್ ಗಡದಲ್ಲಿ ನವೆಂಬರ್ 12 ಮತ್ತು ನವೆಂಬರ್ 20ರಂದು ನಡೆಯಲಿದೆ.

ಭದ್ರತಾ ಕಾರಣದಿಂದ ಇಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮದ್ಯಪ್ರದೇಶ ಮತ್ತು ಮಿಝೋರಮ್ ನಲ್ಲಿ ನವೆಂಬರ್ 28ಕ್ಕೆ ರಾಜಸ್ತಾನ ಮತ್ತು ತೆಲಂಗಾಣದಲ್ಲಿ ಡಿಸೆಂಬರ್ 7ಕ್ಕೆ ನಡೆಯಲಿದೆ. ಈ ಎಲ್ಲಾ ರಾಜ್ಯಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ.

Leave a Reply