Image Courtesy : Ammu's Cook Book

ಬೇಕಾಗುವ ಸಾಮಗ್ರಿಗಳು:

ಬಾಸ್ಮತಿ ಅಕ್ಕಿ- 1 ಕಪ್, ಸೇಬು- 1 (ಸಿಪ್ಪೆ ತೆಗೆದು ತುಂಡು ಮಾಡಿದ್ದು), ಕ್ಯಾಪ್ಸಿಕಮ್- 1/4 ಕಪ್ ತೆಳ್ಳಗೆ ಕತ್ತರಿಸಿದ್ದು,
ಈರುಳ್ಳಿ ತುಂಡುಗಳು- 1/4 ಕಪ್, ಸ್ಪ್ರಿಂಗ್ ಆನಿಯನ್- ಸಣ್ಣಗೆ ಕತ್ತರಿಸಿದ್ದು ಒಂದು, ಸೊಯಸಾಸ್- 1 ಟೀ.ಸ್ಪೂ.,
ವಿನಿಗರ್- 1/2ಟೀ.ಸ್ಪೂ., ಎಣ್ಣೆ- 4 ಟೀ.ಸ್ಪೂ., ಉಪ್ಪು- ರುಚಿಗೆ, ತುಪ್ಪ- 2 ಟೀ.ಸ್ಪೂ.

ತಯಾರಿಸುವ ವಿಧಾನ:

ಬಾಸ್ಮತಿ ಅಕ್ಕಿಯನ್ನು ಅರ್ಧ ಗಂಟೆ ನೆನೆಹಾಕಿ ಬಳಿಕ ಉಪ್ಪು ಸೇರಿಸಿ ಬೇಯಿಸಿ ಇಟ್ಟುಕೊಳ್ಳಿ. ಒಂದು ಪ್ಯಾನನ್ನು ಉರಿಯಲ್ಲಿಟ್ಟು ಎಣ್ಣೆ ಹಾಕಿ ಬಿಸಿಯಾದ ಮೇಲೆ ಕತ್ತರಿಸಿಟ್ಟ ಈರುಳ್ಳಿ ಬೇಯಿಸಿ ಕ್ಯಾಪ್ಸಿಕಮ್, ಆ್ಯಪಲ್, ಸೋಯಸಾಸ್, ವಿನಿಗರ್ ಸೇರಿಸಿ ಚೆನ್ನಾಗಿ ಮಿಕ್ಸ್‍ಮಾಡಿ. ಸೇಬು, ಕ್ಯಾಪ್ಸಿಕಮ್ ಅರ್ಧ ಬೆಂದ ಬಳಿಕ ಬೇಯಿಸಿದ ಅನ್ನ ತುಪ್ಪ ಸೇರಿಸಿ ಮಿಕ್ಸ್ ಮಾಡಿ ಸಲಾಡ್, ಟೊಮೆಟೊ ಕೆಚಪ್ ಜೊತೆಗೆ ಸವಿಯಿರಿ

Leave a Reply