ಹಸೈನಾಕನ ಬಾಳಲ್ಲಿ ಹೊಸ ಹರುಷ. ಹಸೈನಾ ಅವರ ಪರಿಚಯವಿಲ್ಲದವರು ಮೂಲ್ಕಿ ಕಾರ್ನಾಡು ಹೆಜಮಾಡಿ ಪರಿಸರದಲ್ಲಿ ಬಹಳ ವಿರಳ. ತಲೆಯಲ್ಲಿ ಉದ್ದನೆಯ ನಾಗ ಜಡೆ ಕೈಯಲ್ಲಿ ಎರಡು ಗಂಟು ಹಿಡಿದುಕೊಂಡು ಈ ಭಾಗದಲ್ಲಿ ತಿರುಗಾಡುತ್ತಿರುವ ಇವರು ಮಾನಸಿಕ ಅಸ್ವಸ್ಥರಾಗಿದ್ದಾರೆ.

ಇವತ್ತು ಬೆಳಿಗ್ಗೆ ಬಪ್ಪನಾಡು ದೇವಸ್ಥಾನದ ಹತ್ತಿರ ಬರುತ್ತಿರುವಾಗ ಇವರು ಆಪತ್ಬಾಂಧವ ತಂಡಕ್ಕೆ ಕಾಣಸಿಗುತ್ತಾರೆ. ತಕ್ಷಣ ಕಾರ್ಯಪ್ರವೃತ್ತರಾದ ಆಸಿಫ್ ಆಪತ್ಬಾಂಧವ ಹಾಗೂ ತಂಡ ಇವರನ್ನು ಕರೆದುಕೊಂಡು ಹೋಗಿ ಸ್ನಾನ ಮಾಡಿಸಿ ಸುಮಾರು ವರುಷಗಳಿಂದ ಬಿಟ್ಟಿದ್ದ ತಲೆಕೂದಲನ್ನು ತೆಗೆದು ಶುಚಿಗೊಳಿಸಿದೆ. ಇದೀಗ ಆಪತ್ಬಾಂಧವ ಚಾರಿಟೇಬಲ್ ಟ್ರಸ್ಟ್ ಸೈಕೋರಿಯಾ ಬಿಲೇಶನ್ ಸೆಂಟರ್ ಕಾರ್ನಾಡ್ ನಲ್ಲಿ ಆಪತ್ಬಾಂಧವ ತಂಡ ಅವರನ್ನು ನೋಡಿಕೊಳ್ಳುತ್ತಿದೆ. ಈ ಸೇವಾ ಕಾರ್ಯದಲ್ಲಿ ಸಂಶೀರ್ ದಾಮಸ್ಕಟ್ಟೆ ಶರತ್ ಏಳಿಂಜೆ ಆಸಿಫ್ ಬಜ್ಪೆ ಆಸಿಫ್ ಅಡ್ಡೂರು ಸಮಾಜಸೇವಕರಾದ ಶರೀಫ್ ಕೊಲ್ನಾಡು ಸಹಕರಿಸಿದ್ದರು ಇನ್ನು ಕೂಡ ಇಂತಹ ಮಾನವೀಯತೆಯ ಕೆಲಸವನ್ನು ಮಾಡಲು ದೇವರು ಆರೋಗ್ಯ ಆಯುಷ್ಯ ಕರುಣಿಸಲಿ.

Leave a Reply