ಮಾನವನ ದೇಹವು ನೂರಾರು ವಿಧದ ಜೀವಕೋಶಗಳಿಂದ ರೂಪು ಗೊಂಡಿರುತ್ತವೆ. ಈ ಜೀವಕೋಶಗಳ ಬೆಳವಣಿಗೆಯಲ್ಲಿ ಉತ್ಪಾದನಾಶಕ್ತಿ ಸ್ವಲ್ಪ ಏರುಪೇರಾದರೂ ಒಂದಲ್ಲ ಒಂದು ಸಮಸ್ಯೆ ಕಂಡುಬರುತ್ತದೆ. ಹೀಗೆ ಜೀವಕೋಶಗಳ ಏರುಪೇರಿನಿಂದ ಉಂಟಾ ಗುವ ರೋಗಗಳಲ್ಲಿ ಕ್ಯಾನ್ಸರ್ ರೋಗವೂ ಒಂದು. ಇದೊಂದು ಭಯಾನಕ ರೋಗ. ಸಾವಿನಲ್ಲಿ ಪರ್ಯಾವಸಾನಗೊಳ್ಳುವ ಭೀಕರ ಮಾರಕ ರೋಗ.

ಕ್ಯಾನ್ಸರ್ ರೋಗವು ದೇಹದ ಯಾವುದೇ ಅಂಗಾಂಗಕ್ಕೆ ಬರಬಹುದು. ಸ್ತನ ಕ್ಯಾನ್ಸರ್ ವಿಶ್ವದಾದ್ಯಂತ ಎಲ್ಲಾ ದೇಶಗಳಲ್ಲಿಯೂ ಎಲ್ಲಾ ವರ್ಗದ ಮಹಿಳೆಯರಲ್ಲೂ ಬರುವಂತಹ ಕೆಟ್ಟ ಪರಿಣಾಮ ಬೀರುವಂತಹ ಭೀಕರ ಕಾಯಿಲೆಯಾಗಿದೆ.

ಜಗತ್ತಿನಲ್ಲಿ ಪ್ರತಿವರ್ಷ ಹತ್ತು ಲಕ್ಷಕ್ಕೂ ಮೀರಿ ಮಹಿಳೆಯರು ಸ್ತನ ಕ್ಯಾನ್ಸರ್ ರೋಗಕ್ಕೆ ಗುರಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1960ರ ದಶಕದಲ್ಲಿ ಶೇಕಡಾ 5ರಷ್ಟು ಮಹಿಳೆಯರಲ್ಲಿ ಕಂಡುಬರುತ್ತಿದ್ದ ಸ್ತನ ಕ್ಯಾನ್ಸರ್ ಪ್ರಮಾ ಣವು ಇತ್ತೀಚಿನ ವರ್ಷಗಳಲ್ಲಿ ಅತ್ಯಧಿಕ ವಾಗಿ ಕಂಡುಬರುತ್ತಿದ್ದು ಇಂದು ಇದರ ಪ್ರಮಾಣ ಶೇಕಡಾ 7ರಷ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ವರದಿಯಲ್ಲಿ ದೃಢೀ ಕರಿಸಲಾಗಿದೆ.
ಸ್ತನ ಕ್ಯಾನ್ಸರ್ ರೋಗಕ್ಕೆ ಬಲಿ ಯಾಗುತ್ತಿರುವವರಲ್ಲಿ ಭಾರತವೂ ಹಿಂದೆ ಉಳಿದಿಲ್ಲ. ಭಾರತದ ಮಹಾನಗರ ಗಳಾದ ಬೆಂಗಳೂರು, ಮುಂಬಯಿ, ಕೊಲ್ಕತ್ತಾ ನಗರಗಳಲ್ಲಿ ಪ್ರತಿವರ್ಷ ಶೇಕಡಾ 5ರಷ್ಟು ಸ್ತ್ರೀಯರು ಸ್ತನ ಕ್ಯಾನ್ಸರ್‍ಗೆ ಗುರಿಯಾಗುತ್ತಿದ್ದಾರೆ ಎಂದು ಮಹಿಳಾ ಸಮೀಕ್ಷೆಯೊಂದು ಮಾಹಿತಿ ನೀಡುತ್ತದೆ.

ಸ್ತನ ಕ್ಯಾನ್ಸರ್ ಬಹುತೇಕ ಮಹಿಳೆ ಯರಿಗೆಂದೇ ಮೀಸಲಾಗಿರುವ ಕಾಯಿಲೆ ಯಾದರೂ ಒಟ್ಟು ಸ್ತನ ಕ್ಯಾನ್ಸರ್ ಉಳ್ಳವರಲ್ಲಿ ಶೇಕಡಾ 1ರಷ್ಟು ಪುರುಷರೂ ಇದ್ದಾರೆ. ಸಾಮಾನ್ಯವಾಗಿ 40 ವರ್ಷದ ನಂತರ ಕಾಣಿಸಿಕೊಳ್ಳುವ ಈ ರೋಗವು 65 ವರ್ಷ ದಾಟಿದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಋತುಮತಿಯಾದವರಲ್ಲಿ ಮತ್ತು ಮಾಸಿಕ ಋತುಚಕ್ರದಲ್ಲಿ ಏರುಪೇರಾಗಿದ್ದು ಹೆಚ್ಚಿನ ರಕ್ತಸ್ರಾವವಿರುವವರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಹೆಚ್ಚು ವಯಸ್ಸಾದ ಮೇಲೆ (30ರ ನಂತರ) ವಿವಾಹವಾಗಿರುವ ಮಹಿಳೆಯರಲ್ಲಿ ಮತ್ತು ಬಂಜೆತನದಿಂದ ಬಳಲುತ್ತಿರುವ ಮಹಿಳೆ ಯರಲ್ಲಿ ಇದರ ಪ್ರಮಾಣ ಇತರ ಕಾರಣಗಳಿಗಿಂತ ಎರಡರಷ್ಟಿರುತ್ತದೆ. ಇದು ವಂಶಪಾರಂಪರ್ಯದಿಂದಲೂ ಬರಬಹುದು. ಹಾರ್ಮೋನ್ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಶೇಕಡಾ 25ರಷ್ಟು ಹೆಚ್ಚಿರುತ್ತದೆ.
ಆಧುನಿಕ ಯುಗದಲ್ಲಿ ಸ್ವೇಚ್ಛಾ ಚಾರಕ್ಕೆ ಒಳಗಾಗಿ, ನವೀನ ಸಂಸ್ಕøತಿಯ ಹೆಸರಿನಲ್ಲಿ ಜೀವನಶೈಲಿಯನ್ನು ಬದ ಲಾಯಿಸಿಕೊಂಡಿರುವ ಮಹಿಳೆಯರು ಮದ್ಯಪಾನ, ಧೂಮಪಾನ ಮುಂತಾದ ಚಟಗಳಿಗೆ ಬಲಿಯಾಗಿರುತ್ತಾರೆ. ಇಂತಹ ವರಲ್ಲಿ ಸ್ತನ ಕ್ಯಾನ್ಸರ್ ಕಂಡುಬರುವ ಪ್ರಮಾಣ ಹೆಚ್ಚಾಗಿರುತ್ತದೆ. ಆದ್ದರಿಂದ ಸ್ತನಗಳಲ್ಲಿ ಯಾವುದೇ ರೀತಿಯ ಗಡ್ಡೆ ಗಳು ಅಥವಾ ಇತರ ಯಾವುದೇ ಬದಲಾವಣೆಗಳು ಕಂಡು ಬಂದರೆ ಅದನ್ನು ಪ್ರಾರಂಭಿಕ ಹಂತದಲ್ಲಿಯೇ ಸೂಕ್ತ ತಜ್ಞ ವೈದ್ಯರಿಗೆ ತೋರಿಸಿ ಯಾವುದೇ ಹಿಂಜರಿಕೆ, ಸಂಕೋಚವಿಲ್ಲದೇ ಪರೀಕ್ಷೆ ಮಾಡಿಸಿ ಕೊಂಡು ಚಿಕಿತ್ಸೆ ಪಡೆಯಬೇಕು. ಇಲ್ಲ ವಾದಲ್ಲಿ ಜೀವನವನ್ನು ನೋವಿನಲ್ಲೇ ಕಳೆಯಬೇಕಾಗುತ್ತದೆ. ಅಲ್ಲದೆ ಜೀವನವನ್ನು ಕಳೆದುಕೊಳ್ಳಬೇಕಾಗುತ್ತದೆ.

ಸ್ತನ ಕ್ಯಾನ್ಸರ್ ನಾಲ್ಕು ಹಂತಗಳಲ್ಲಿ ಕಾಣಿಸಿಕೊಳ್ಳುತ್ತದೆ

ಮೊದಲನೆ ಹಂತ: ಸ್ತನದಲ್ಲಿ ಗೆಡ್ಡೆ ಕಾಣಿಸಿಕೊಂಡು ಅದು 2 ಸೆ.ಮೀ.ಗಿಂತ ಕಡಿಮೆಯಿರುತ್ತದೆ ಮತ್ತು ಬೇರೆ ಕಡೆ ಹರಡುವುದಿಲ್ಲ.
ಎರಡನೇ ಹಂತ: ಈ ಗಡ್ಡೆ ಇನ್ನೂ ಚಿಕ್ಕದಾಗಿರುತ್ತದೆ. ಆದರೆ ಇದು ಸ್ತನದ ಇತರ ಭಾಗಕ್ಕೂ ಅಂದರೆ ಕಂಕುಳಿಗೂ ಹರಡಿರುತ್ತದೆ.
ಮೂರನೇ ಹಂತ: ಈ ಹಂತದಲ್ಲಿ ಗೆಡ್ಡೆ ಮುಕ್ಕಾಲು ಪಾಲು ದೊಡ್ಡದಾಗಿದ್ದು ಸರಿಸುಮಾರು 5 ಸೆಂ.ಮೀ.ನಷ್ಟಾಗಿರುತ್ತದೆ. ಜೊತೆಗೆ ಹೆಚ್ಚಾಗಿ ಹರಡುತ್ತದೆ.
ನಾಲ್ಕನೇ ಹಂತ: ಕ್ಯಾನ್ಸರ್ ರೋಗವು ಇತರ ಅಂಗಾಂಗಗಳಿಗೂ ಹರಡಿರುತ್ತದೆ. ಆದುದರಿಂದ ಪ್ರಾರಂಭಿಕ ಹಂತದಲ್ಲಿಯೇ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಸೂಕ್ತ.

ಸ್ತನ ಕ್ಯಾನ್ಸರ್‍ನ ಲಕ್ಷಣಗಳೇನೆಂದರೆ:

1) ಸ್ತನಗಳಲ್ಲಿ ನೋವು ಅಥವಾ ನೋವಿಲ್ಲದ ಗೆಡ್ಡೆಗಳು ಮೂಡುವುದು.
2) ಸ್ತನಗಳಲ್ಲಿ ಅಥವಾ ಕಂಕುಳಲ್ಲಿ ಗೆಡ್ಡೆ ಕಾಣಿಸಿಕೊಳ್ಳುವುದು.
3) ಸ್ತನದ ಮೂಲ ರೂಪ ಮತ್ತು ಆಕಾರದಲ್ಲಿ ಬದಲಾವಣೆ ಕಂಡುಬರುವುದು.
4) ಸ್ತನದ ವರ್ಣದಲ್ಲಿ ಬದ ಲಾವಣೆಯಾಗುವುದು.
5) ತೊಟ್ಟಿನಿಂದ ರಕ್ತಸ್ರಾವವಾಗುವುದು ಅಥವಾ ಕೀವಿನ ಸ್ರಾವವಾಗುವುದು.
6) ಸ್ತನದ ತೊಟ್ಟಿನಲ್ಲಿ ಮೃದುತ್ವದ ಬದಲಾಗಿ ಒರಟಾಗುವುದು ಮತ್ತು ಗಡುಸಾಗುವುದು.
7) ಸ್ತನದಲ್ಲಿರುವ ತೊಟ್ಟು ಹಿಂದಕ್ಕೆ ಸರಿಯುವುದು ಮತ್ತು ಅಧಿಕವಾದ ನೋವು ಇತ್ಯಾದಿ.

ಸ್ತನ ಕ್ಯಾನ್ಸರಿನ ತಪಾಸಣಾ ವಿಧಾನ ಗಳಲ್ಲಿ ಮೊದಲಿಗೆ ಪ್ರತಿಯೊಬ್ಬ ಸ್ತ್ರೀಯು ಸ್ವಯಂ ಪರೀಕ್ಷೆ ಮಾಡಿಕೊಳ್ಳಬೇಕು. ಈ ಪರೀಕ್ಷೆಯಲ್ಲೇನಾದರೂ ಗಡ್ಡೆಗಳು ಅಥವಾ ಇತರ ಯಾವುದೇ ಬದಲಾವಣೆಗಳು ಕಂಡುಬಂದರೆ ತಜ್ಞವೈದ್ಯರನ್ನು ಪರೀಕ್ಷಿಸಿ ಕೊಳ್ಳಬೇಕು. ಅಗತ್ಯ ಬಿದ್ದಲ್ಲಿ ಮೆಮೋ ಗ್ರಾಫಿ, ಎಂ.ಆರ್. ಸ್ಕ್ಯಾನಿಂಗ್, ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮುಂತಾದ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಅಲ್ಲದೆ ಬಯಾಪ್ಸಿ ಪರೀಕ್ಷೆಯನ್ನು ಮಾಡಿಸುವುದರಿಂದ ಸ್ತನ ಕ್ಯಾನ್ಸರ್ ಇದೆಯೇ? ಎಂಬುದನ್ನು ಖಚಿತವಾಗಿ ತಿಳಿಯಬಹುದು.

ಸ್ವಯಂ ಪರೀಕ್ಷೆಯೆಂದರೆ ಸ್ತ್ರೀಯು ಕನ್ನಡಿಯೆದುರು ನಿಂತು ಸ್ತನ, ಸ್ತನ ತೊಟ್ಟುಗಳನ್ನು ಗಮನವಿಟ್ಟು ನೋಡಿ. ಅವುಗಳ ಗಾತ್ರ, ಆಕಾರದಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದಿದೆಯೇ ಎಂಬುದನ್ನು ಪರೀಕ್ಷಿಸಿ ದೃಢಪಡಿಸಿ ಕೊಳ್ಳಬೇಕು. ಮೊಲೆ ತೊಟ್ಟನ್ನು ಒತ್ತಿದಾಗ ಏನಾದರೂ ದ್ರವದ ಸ್ರವಿಕೆಯಾಗುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಹಾಗೆ ಕೈಗಳನ್ನು ಮೇಲೆತ್ತಿ ಮತ್ತು ನಿತಂಬದ ಮೇಲೆ ಕೈಯಿಟ್ಟು ಉಂಟಾ ಗುವ ವ್ಯತ್ಯಾಸಗಳನ್ನು ಗಮನಿಸಬೇಕು. ಆ ಮೇಲೆ ಕೈಯಿಂದ ಸ್ತನಗಳನ್ನು ಮುಟ್ಟಿ ಗಟ್ಟಿಯಿದೆಯೇ? ಒತ್ತಿದಾಗ ಸ್ತನದ ಒಳಗೆ ಏನಾದರೂ ಗಂಟುಗಳು ಇದೆಯೇ? ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಹೀಗೆ ಪರೀಕ್ಷಿಸುವಾಗ ಏನಾದರೂ ವ್ಯತ್ಯಾಸ ಕಂಡು ಬಂದರೆ ತಜ್ಞ ವೈದ್ಯರನ್ನು ಕಾಣುವುದು ಅವಶ್ಯಕ. ಸ್ತನಗಳ ಪರೀಕ್ಷೆ ಯನ್ನು ಸಾಮಾನ್ಯವಾಗಿ ತಿಂಗಳಿ ಗೊಮ್ಮೆ ಮಾಡಿಕೊಳ್ಳುವುದು ಒಳ್ಳೆಯದು. ಪರೀಕ್ಷೆಯ ವೇಳೆಯಲ್ಲಿ ಎರಡೂ ಸ್ತನಗಳಲ್ಲಿನ ಆಕಾರ, ಗಾತ್ರ ಮತ್ತು ದೃಢತೆಯಲ್ಲಿ ಏನಾದರೂ ಬದಲಾವಣೆ ಯಾಗಿದೆಯೇ ಎಂಬುದನ್ನು ಗಮನಿಸ ಬೇಕು. ಸ್ತನಗಳಲ್ಲಿ ಗಡ್ಡೆ, ದುರ್ಮಾಂಸ, ಚರ್ಮದ ಬಣ್ಣದಲ್ಲಿ ಬದಲಾವಣೆ, ತುರಿಕೆ, ಗುಳಿ ಏನಾದರೂ ಬಿದ್ದಿದೆಯೇ, ಮೊಲೆ ತೊಟ್ಟೇನಾದರೂ ಒಳಸರಿದಿದೆಯೇ ಎಂಬುದನ್ನು ನೋಡಿಕೊಳ್ಳಬೇಕು.

ಸ್ತನ ಕ್ಯಾನ್ಸರಿಗೆ ಸೂಕ್ತ ಚಿಕಿತ್ಸೆ ನೀಡದಿದ್ದರೆ ಸ್ತ್ರೀಯ ಆಕರ್ಷಕ ಅಂಗ ವೆನಿಸಿರುವ, ಕರುಳ ಕುಡಿಗೆ ಅಮೃತ ಉಣಿಸುವ ಸ್ತನಗಳೇ ಇಲ್ಲವಾಗಬಹುದು. ಇದರ ಜೊತೆಗೆ ಈ ಕ್ಯಾನ್ಸರ್ ದೇಹದ ಇತರ ಅಂಗಾಂಗಗಳಿಗೂ ಹರಡುತ್ತದೆ. ಜೀವನದ ಸಂತೋಷಮಯ ಕ್ಷಣಗಳನ್ನು ಕಳೆದುಕೊಂಡು ಕೊನೆಯ ದಿನಗಳವರೆಗೂ ನೋವಿನಲ್ಲಿ ಕಳೆಯುವ ಪರಿಸ್ಥಿತಿ ಉಂಟಾಗಬಹುದು.

ಕ್ಯಾನ್ಸರ್ ರೋಗಕ್ಕೆ ಇತ್ತೀಚಿನ ದಿನಗಳಲ್ಲಿ ಅತ್ಯಂತ ಪರಿಣಾಮಕಾರಿ ಚಿಕಿತ್ಸಾ ವಿಧಾನ ಗಳು ಜಾರಿಗೆ ಬಂದಿವೆ. ಕೀಮೋಥೆರಪಿ, ಬಯೊಲಾಜಿಕಲ್ ಥೆರಪಿ, ಶಸ್ತ್ರಚಿಕಿತ್ಸೆ ಮುಂತಾದ ಚಿಕಿತ್ಸಾ ವಿಧಾನಗಳಿವೆ.

ಲೇಖಕರು : ಶಾರದಾ ಎ. ಅಂಚನ್ ಕಲಂಬೋಲಿ, ನವಿ ಮುಂಬಯಿ

Leave a Reply