ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಆಸ್ತಿಯನ್ನು ಘೋಷಿಸಿದ್ದು, ಅವರು 3.4 ಕೋಟಿ ರೂ.ಗಳ ಆಸ್ತಿ ಹೊಂದಿದ್ದಾರೆ ಎಂದು ಚುನಾವಣಾ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. 2015 ರಲ್ಲಿ, ಕೇಜ್ರಿವಾಲ್ ಅವರ ಒಟ್ಟು ಆಸ್ತಿ 2.1 ಕೋಟಿ ರೂ ಇತ್ತು. ಕೇಜ್ರಿವಾಲ್ ಅವರು ಚುನಾವಣಾ ಆಯೋಗಕ್ಕೆ ನೀಡಿದ ಇತ್ತೀಚಿನ ಅಫಿಡವಿಟ್‌ನಲ್ಲಿ ನೀಡಿದ ವಿವರಗಳ ಪ್ರಕಾರ, ನಗದು ಮತ್ತು ಹೂಡಿಕೆಯಂತಹ ಚರ ಆಸ್ತಿಗಳನ್ನು 9.95 ಲಕ್ಷ ರೂ ಎಂದು ಘೋಷಿಸಿದ್ದಾರೆ. ಅವರ ಪತ್ನಿ ಸುನಿತಾ ಒಟ್ಟು 12 ಲಕ್ಷ ಮೌಲ್ಯದ 320 ಗ್ರಾಂ ಚಿನ್ನ ಸೇರಿದಂತೆ ಒಟ್ಟು 57.07 ಲಕ್ಷ ರೂ. ಮತ್ತು 1 ಕೆಜಿ ಬೆಳ್ಳಿ 40,000 ರೂ ಆಗಿದೆ. 2015 ರಲ್ಲಿ ಕೇಜ್ರಿವಾಲ್ 2.26 ಲಕ್ಷ ರೂ.ಗಳ ಚರ ಆಸ್ತಿಯನ್ನು ಘೋಷಿಸಿದ್ದರೆ, ಅವರ ಪತ್ನಿ 15.28 ಲಕ್ಷ ಹೊಂದಿದ್ದರು.

ವಿಶೇಷವೆಂದರೆ, ಕೇಜ್ರಿವಾಲ್ ಅವರ ಆದಾಯವು 2014-15ರಲ್ಲಿ 7.42 ಲಕ್ಷ ರೂ.ಗಳಿಂದ 2018-19ರಲ್ಲಿ 2.81 ಲಕ್ಷ ರೂ.ಗೆ ಇಳಿದಿದೆ. ಅವರ ಪತ್ನಿ ಸುನೀತಾ ಅವರ ಆದಾಯವೂ 2014-15ರಲ್ಲಿ 12.08 ಲಕ್ಷ ರೂ.ಗಳಿಂದ 2018-19ರಲ್ಲಿ 9.94 ಲಕ್ಷ ರೂ.ಗೆ ಇಳಿದಿದೆ. 32 ಲಕ್ಷ ಮೌಲ್ಯದ ನಗದು ಮತ್ತು ನಿಶ್ಚಿತ ಠೇವಣಿಯನ್ನು ಸ್ವಯಂಪ್ರೇರಿತ ನಿವೃತ್ತಿ ಸೌಲಭ್ಯವಾಗಿ ಸುನಿತಾ ಕೇಜ್ರಿವಾಲ್ ಸ್ವೀಕರಿಸಿದ್ದಾರೆ ಮತ್ತು ಉಳಿದವು ಉಳಿತಾಯವಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಕೇಜ್ರಿವಾಲ್ ಅವರ ಬಳಿ 12,000 ರೂ., ಅವರ ಪತ್ನಿ 9,000 ರೂ. ನಗದು ಹಣವಿದೆ .

ಇದಲ್ಲದೆ, ನವದೆಹಲಿ ಕ್ಷೇತ್ರದ ಚಾಂದನಿ ಚೌಕ್‌ನಲ್ಲಿ ಮತದಾರನಾಗಿರುವ 51 ವರ್ಷದ ಕೇಜ್ರಿವಾಲ್‌ ಸ್ವತಃ ವಾಹನ ಹೊಂದಿಲ್ಲ. ಅವರ ಪತ್ನಿ 6.20 ಲಕ್ಷ ರೂಪಾಯಿ ಮೌಲ್ಯದ ಮಾರುತಿ ಬಲೆನೊ ಹೊಂದಿದ್ದಾರೆ. ಸುನಿತಾ ಅವರು ಸಾರ್ವಜನಿಕ ಭವಿಷ್ಯ ನಿಧಿಗಳು ಮತ್ತು ಎಸ್‌ಬಿಐ ಮ್ಯೂಚುವಲ್ ಫಂಡ್‌ಗಳಲ್ಲೂ ಹೂಡಿಕೆ ಮಾಡಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

Leave a Reply