ಯುಎಇ: ಮೊನ್ನೆ ನಡೆದಿದ್ದ ಭಾರತ ಪಾಕಿಸ್ತಾನದ ಕ್ರಿಕೆಟ್ ಪಂದ್ಯಾಟದ ವೇಳೆ ಭಾರತದ ರಾಷ್ಟ್ರಗೀತೆಯನ್ನು ಪಾಕಿಸ್ತಾನದ ಅಭಿಯಾನಿಯೊಬ್ಬರು ಹಾಡಿದ್ದು, ಇದು ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈಗ ಅವರು ಪುನಃ ಸಾಮಾಜಿಕ ಮಾಧ್ಯಮಗಳಲ್ಲಿ ತಾರೆಯಾಗಿ ಮಿಂಚುತ್ತಿದ್ದಾರೆ.

ಅವರು ತಾನು ಭಾರತದ ರಾಷ್ಟ್ರಗೀತೆ ಹಾಡಲು ಇದ್ದ ಕಾರಣಗಳನ್ನು ಸ್ಪಷ್ಟಪಡಿಸಿದ್ದಾರೆ.ತಾನು ಸಾಮಾನ್ಯ ಪ್ರತೀಕವಾಗಿ ಭಾರತ ಪಾಕಿಸ್ತಾನದ ಕ್ರಿಕೆಟ್ ಪಂದ್ಯಾಟದ ವೇಳೆ ಆ ಹಾಡನ್ನು ಹಾಡಿದ್ದೆ ಎಂದು ಈ ಯುವಕ ಹೇಳಿದ್ದಾರೆ. ಪಾಕಿಸ್ತಾನದ ರಾಷ್ಟ್ರಗೀತೆ ಮೊಳಗಿದಾಗ ಭಾರತದ ಅಭಿಮಾನಿಗಳು ಎದ್ದು ನಿಂತ ಗೌರವ ಸೂಚಿಸುವುದನ್ನು ನೋಡಿದೆ. ಇದರಿಂದ ತಾನು ಭಾರತದ ಗೀತೆಗೂ ಗೌರವ ಸೂಚಿಸಲು ನಿರ್ಧರಿಸಿ ಹಾಡಿದೆ ಎಂದು ಅದಿಲ್ ತಾಜ್ ಹೇಳಿದ್ದಾರೆ.

ಅದಿಲ್ ತಾಜ್ ಭಾರತದ ರಾಷ್ಟ್ರಗೀತೆಯನ್ನು ಕಭಿ ಕುಶ್ ಕಭಿ ಗಮ್ ಸಿನೆಮಾದಲ್ಲಿ ಮಾತ್ರ ನೋಡಿದ್ದರು. ಅವರಿಗೆ ರಾಷ್ಟ್ರಗೀತೆ ಅಲ್ಪಸ್ವಲ್ಪ ಬರುತ್ತಿತ್ತು. ಪಾಕ್ ಪ್ರಧಾನಿ ಶಾಂತಿ ಪ್ರಕ್ರಿಯೆಯಲ್ಲಿ ಭಾರತ ಒಂದು ಹೆಜ್ಜೆ ಇಟ್ಟರೆ ಭಾರತ ಎರಡು ಹೆಜ್ಜೆ ಇಡಲಿದೆ ಎಂದು ಹೇಳಿದ್ದಾರೆ. ಆದ್ದರಿಂದ ಭಾರತೀಯರು ಪಾಕಿಸ್ತಾನದ ರಾಷ್ಟ್ರಗೀತೆ ಗೌರವ ತೋರಿಸಿದ್ದನ್ನು ಕಂಡಿದ್ದೆ. ಹೀಗಾಗಿ ತಾನು ಎರಡು ಹೆಜ್ಜೆ ಮುಂದಿಡಬೇಕೆಂದು ಭಾರತದ ರಾಷ್ಟ್ರಗೀತೆಯನ್ನು ಹಾಡಿದೆ ಎಂದು ಹೇಳಿದ್ದಾರೆ. ಇದೀಗ ಅವರ ವಿವರಣೆಯುಕ್ತ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ.

Leave a Reply