ಮಹಿಳೆಯರು ಅದರಲ್ಲೂ ವಯಸ್ಸಾದ ಮಹಿಳೆಯರು ಸಾಧನೆ ಮಾಡುತ್ತಿರುವುದು ಎಲ್ಲರಿಗೂ ಪ್ರೇರಣೆಯಾಗಿದೆ. ಖ್ಯಾತ ಉದ್ಯಮಿ ಕಿರಣ್‌ ಮಜುಮ್ದಾರ್‌ ತಾಯಿಯಾದ ಯಾಮಿನಿ ಮಜುಮ್ದಾರ್‌ ಅವರು ಲಾಂಡ್ರಿ ಬಿಸಿನೆಸ್‌ ಅನ್ನು 1999ರಲ್ಲಿ ಆರಂಭಿಸಿದಾಗ, ಆಗ ಅವರಿಗೆ 68 ವರ್ಷವಾಗಿತ್ತು. ”ಪತಿಯನ್ನು ಕಳೆದುಕೊಂಡಿದ್ದ ದಿನಗಳವು. ಆಗ ಸುಮ್ಮನೇ ಕುಳಿತುಕೊಳ್ಳಲು ಮನಸ್ಸು ಬರಲಿಲ್ಲ. ಏನಾದರೂ ಮಾಡಬೇಕು ಎಂದು ತೀರ್ಮಾನಿಸಿದೆ. ಈ ಬಿಸಿನೆಸ್‌ ನೆರವಾಯಿತು. ಪ್ರತಿ ದಿನ ಕಚೇರಿಗೆ ಹೋಗುತ್ತೇನೆ. ನಾಲ್ಕು ಗಂಟೆ ಕೆಲಸ ಮಾಡುತ್ತೇನೆ. ನನಗೀಗ 88, ಆದರೆ ನಾನು ಈಗಲೂ ಯಂಗ್‌ ” ಎನ್ನುತ್ತಾರೆ ಯಾಮಿನಿ. ”ನಾನು ಇಂದು ಏನಾಗಿದ್ದೇನೆಯೋ ಅದಕ್ಕೆ ನನ್ನ ತಾಯಿಯ ಉದ್ಯಮ ಸಂಬಂಧಿ ಜೀನ್ಸ್‌ ಕಾರಣ,” ಎಂದು ಕಿರಣ್‌ ಹೇಳಿದ್ದಾರೆ.

1999 ರಲ್ಲಿ ಕಿರಣ್ ತನ್ನ ತಾಯಿಗೆ “ಸ್ವಲ್ಪ ಸಹಾಯ” ಬೇಕಾ ಎಂದು ಎಂದು ಕೇಳಿದಾಗ, ಅವರು ಉದ್ಯಮಿಯಾಗುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ ಏನಾಯಿತು? ತಾಯಿ ತನ್ನ ಮಗಳ ಸ್ನೇಹಿತನೊಂದಿಗೆ ಜೀವ್ಸ್ ಎಂಬ ಲಾಂಡ್ರಿ ವ್ಯವಹಾರವನ್ನು ಪ್ರಾರಂಭಿಸಿದರು. ಇದಕ್ಕಾಗಿ ಯಾಮಿನಿ ಮನೆ ಅಡವಿಟ್ಟು, ಬಯೋಕಾನ್‌ನಲ್ಲಿ ತನ್ನ ಷೇರುಗಳನ್ನು ಮಾರಿ ವ್ಯವಹಾರವನ್ನು ಪ್ರಾರಂಭಿಸಿದಳು. ಆದರೆ ಮೂರು ವರ್ಷ ಆಗಲಿಲ್ಲ. ಮಗಳ ಸ್ನೇಹಿತ ಈ ಕಂಪೆನಿ ಬಂದ್ ಮಾಡಲು ಸಲಹೆ ನೀಡಿ ಬಿಟ್ಟು ಹೋದರು. ಬಳಿಕ ಎಲ್ಲವೂ ಇವರ ಮೇಲೆ. ಯಾಮಿನಿ ಜೀವ್ಸ್ ಕಂಪೆನಿಯ ಏಕೈಕ ಮಾಲೀಕರಾದರುಬಿಸಿನೆಸ್ ಹಿಡಿಯಲು ಅವರು ದಿನಕ್ಕೆ ಸುಮಾರು 10-12 ಗಂಟೆಗಳ ಕಾಲ ಶ್ರಮಿಸುತ್ತಿದ್ದರು.

ಈ ವಯಸ್ಸಿನಲ್ಲಿ ಕೆಲಸ ಮಾಡುವುದೇ ಎಂದು ಕೇಳಿದಾಗ 75 ನೇ ವಯಸ್ಸಿನಲ್ಲಿ ದೇಶವನ್ನು ಆಳಲು ಸಾಧ್ಯವಾದರೆ(ವಾಜಪೇಯಿ ಆಗ ಪ್ರಧಾನಿ ಆಗಿದ್ದರು), ನನ್ನ ವಯಸ್ಸಿನಲ್ಲಿ ನಾನು ಕೆಲಸ ಮಾಡಬಾರದೇ ಎಂದು ಕೇಳಿದರು. ಆರು ವರ್ಷಗಳ ನಂತರ ಅವರ ಕಂಪೆನಿ ಯಶಸ್ವಿಯಾಗಲು ಮುಂದಡಿ ಹೆಜ್ಜೆ ಇರಿಸಿತು. 2009 ರಲ್ಲಿ ಸರ್ಕಾರಕ್ಕೆ ತನ್ನ ಉತ್ತಮ ತೆರಿಗೆಯನ್ನು ಪಾವತಿಸಿದರು. ಇದು ಆ ಕಂಪೆನಿಯಲ್ಲಿ 25 ದುಡಿಯುತ್ತಾರೆ. ಕೆಲಸಕ್ಕೆ ಹಹೆಚ್ಚಾಗಿ ಮಹಿಳೆಯರಿಗೆ ಆದ್ಯತೆ ಕೊಡುತ್ತಾರೆ. ಯಾವ ವಯಸ್ಸಿನಲ್ಲೂ ಕೆಲಸ ನಿಲ್ಲಿಸಬಾರದು. ನಗುವುದನ್ನು ನಿಲ್ಲಿಸ ಬಾರದು ಎಂದು ಅವರು ಹೇಳಿದರು.

 

LEAVE A REPLY

Please enter your comment!
Please enter your name here