ನ್ಯೂಝಿಲ್ಯಾಂಡಿನ ಕ್ರೈಸ್ಟ್ ಚರ್ಚ್ ನಗರದ ಮಸೀದಿಗಳಲ್ಲಿ ನಮಾಜ್ ಮಾಡುತ್ತಿದ್ದ ಭಕ್ತರನ್ನು ಗುಂಡಿಟ್ಟು ಕೊಂದ ಭಯೋತ್ಪಾದಕನ ಕೃತ್ಯವನ್ನು ಸಮರ್ಥಿಸಿದ ಆಸ್ಟ್ರೇಲಿಯನ್ ಸಂಸದ ಫ್ರೇಝರ್ ಏನಿಂಗ್‌ನ ತಲೆಗೆ ಮೊಟ್ಟೆ ಎಸೆದ ಆಸ್ಟ್ರೇಲಿಯನ್ ಹುಡುಗ ವಿಲ್ ಕೊನೊಲ್ಲಿ ಒಂದೇ ದಿನದಲ್ಲಿ ಹೀರೋ ಆಗಿದ್ದ. ಸೋಶಿಯಲ್ ಮೀಡಿಯಾದಲ್ಲಿ ಈ ಯುವಕನಿಗೆ “ಫ್ಯಾಶಿಸ್ಟ್ ವಿರೋಧಿ ಹೀರೋ” ಎಂಬ ಬಿರುದು ಲಭಿಸಿತ್ತು. 17 ವರ್ಷದ ಈ ಯುವಕನ ಬ್ಯಾಂಕ್ ಖಾತೆಗೆ ಒಂದೇ ದಿನದಲ್ಲಿ ವಿಶ್ವದಾದ್ಯಂತ ಫ್ಯಾಶಿಸ್ಟ್ ವಿರೋಧಿಗಳೆಂದು ತಮ್ಮನ್ನು ಉಲ್ಲೇಖಿಸಿರುವ ಜನರು, ಈತನ ಕಾನೂನು ವೆಚ್ಚ ಭರಿಸಲು ಸುಮಾರು 43 ಸಾವಿರ ಡಾಲರ್ (27 ಲಕ್ಷ ರೂ.) ಧನ ಸಹಾಯ ಮಾಡಿದ್ದರು.  ಮಾತ್ರವಲ್ಲ, ಈ ಹಣದಿಂದ ಮೊಟ್ಟೆ ಖರೀದಿಸಬೇಕು ಮತ್ತು ಅದನ್ನು ದ್ವೇಷ ಹರಡುವ ಸಮಾಜ ದ್ರೋಹಿ ಶಕ್ತಿಗಳ ತಲೆಗೆ ಬಡಿಯಬೇಕು ಎಂದು ಒಬ್ಬರು ಟ್ವಿಟ್ಟರ್ ಬಳಕೆದಾರರು ಕಮೆಂಟ್ ಮಾಡಿದ್ರು. ಇದೀಗ ಅದೇ ಹುಡುಗ ಮತ್ತೆ ಸುದ್ದಿಯಲ್ಲಿದ್ದಾನೆ. ನ್ಯೂಜಿಲೆಂಡ್ ಮಸೀದಿ ಗುಂಡಿನ ದಾಳಿಯಲ್ಲಿ ಬದುಕುಳಿದವರಿಗೆ 100,000 ಆಸ್ಟ್ರೇಲಿಯನ್ ಡಾಲರ್ಗಳನ್ನು (ರೂ. 48.25 ಲಕ್ಷಕ್ಕಿಂತಲೂ ಹೆಚ್ಚು) ದಾನ ಮಾಡುವುದಾಗಿ ಹೇಳಿದ್ದಾನೆ.

Leave a Reply