ನವದೆಹಲಿ: ಆರ್ಥಿಕ ಬೆಳವಣಿಗೆ ಹಿನ್ನಡೆಯ ಪರಿಣಾಮವಾಗಿ ಆಟೋಮೊಬೈಲ್ ಉದ್ಯಮ ಕ್ಷೇತ್ರ ಗಂಭೀರ ಬಿಕ್ಕಟ್ಟಿನಲ್ಲಿ ಸಿಲುಕಿದ್ದು ಆಗಸ್ಟ್ ತಿಂಗಳ ಮಾರಾಟದಲ್ಲಿ ಭಾರೀ ಇಳಿಕೆಯಾಗಿದೆ. ಅದರಲ್ಲೂ ಪ್ರಯಾಣಿಕರ ವಾಹನಗಳ ವಿಭಾಗದ ವಹಿವಾಟು 2 ದಶಕಗಳಷ್ಟು ಹಿಂದಿನ ಮಟ್ಟಕ್ಕೆ ಕುಸಿದಿದೆ. ಪ್ರಯಾಣಿಕರ ಕಾರುಗಳ ಮಾರಾಟ ಅತಿದೊಡ್ಡ ಕುಸಿತಕ್ಕೊಳಗಾಗಿದ್ದು ಶೇ.41ರಷ್ಟು ಕಡಿಮೆಯಾಗಿದೆ.

ಕಳೆದ ವರ್ಷ ಇದೇ ತಿಂಗಳಲ್ಲಿ 1.96 ಲಕ್ಷದಷ್ಟಿದ್ದ ಪ್ರಯಾಣಿಕರ ಕಾರುಗಳ ಮಾರಾಟ ಈ ವರ್ಷ 1.16ಲಕ್ಷಕ್ಕೆ ಇಳಿದಿದೆ. ಸರುಕು ಸಾಗಣೆ ವಾಹನ ಮಾರಾಟ ಮಾತ್ರ ಕೇವಲ 2.2ರಷ್ಟು ಇಳಿಕೆಯಾಗಿದೆ. ದ್ವಿಚಕ್ರ ವಾಹನಗಳ ಮಾರಾಟ 3 ವರ್ಷಗಳ ಅತಿ ಕಡಿಮೆ ಹಂತಕ್ಕೆ ತಲುಪಿದ್ದು ಶೇ.22ರಷ್ಟು ಇಳಿಕೆ ಕಂಡಿದೆ. ವ್ಯಾನ್ ವಿಭಾಗದಲ್ಲೂ ಭಾರಿ ಕುಸಿತ ಉಂಟಾಗಿದ್ದು ಶೇ.47ರಷ್ಟು ಮಾರಾಟ ಕುಂಠಿತವಾಗಿದೆ.
ಭಾರತೀಯ ಆಟೋಮೊಬೈಲ್ ತಯಾರಕರ ಸೊಸೈಟಿ (ಎಸ್‌ಐವಿಎಂ) ಈ ವಿದ್ಯಮಾನದ ಬಗ್ಗೆ ಅಪಾರ ಆತಂಕ ವ್ಯಕ್ತಪಡಿಸಿದ್ದು ತಕ್ಷಣವೇ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಪಡಿಸಿದೆ.

Leave a Reply