ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ರಾಮ ಜನ್ಮಭೂಮಿ ವಿವಾದ ಪ್ರಕರಣದ ಅಪೀಲಿನಲ್ಲಿ ವಾದ ಆಲಿಸುವುದಕ್ಕಿರುವ ಅಡ್ಡಿಗಳು ನಿವಾರಣೆಗೊಂಡಿದೆ ಎಂದು ವಿಶ್ವ ಹಿಂದೂ ಪರಿಷತ್ ಹೇಳೀದೆ. ವಿಎಚ್‍ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಸುಪ್ರೀಂಕೋರ್ಟಿನ ಮೂವರು ಸದಸ್ಯರ ತೀರ್ಪಿಗೆ ಪ್ರತಿಕ್ರಿಯೆ ನೀಡಿದ್ದಾರೆ.

1994ರ ಅಲಾಹಾಬಾದ್ ಹೈಕೋರ್ಟಿನ ತೀರ್ಪುವಿಶಾಲ ಸಂವಿಧಾನ ಪೀಠದ ಪರಿಗಣನೆಗೊಪ್ಪಿಸಬೇಕೆನ್ನುವ ಸುನ್ನಿ ವಕ್ಫ್ ಬೋರ್ಡಿನ ಬೇಡಿಕೆಯನ್ನು ಸುಪ್ರೀಂಕೋರ್ಟು ತಳ್ಳಿ ಹಾಕಿದ ಹಿನ್ನೆಲೆಯಲ್ಲಿ ಅಲೋಕ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬಾಬರಿ ಮಸೀದಿ-ರಾಮಜನ್ಮಭೂಮಿ ಪ್ರಕರಣದಲ್ಲಿ ಅನುಬಂಧ ಪ್ರಕರಣವನ್ನು ವಿಶಾಲ ಸಂವಿಧಾನ ಪೀಠಕ್ಕೆ ಒಪ್ಪಿಸಬೇಕೆನ್ನುವ ಅರ್ಜಿಯನ್ನು ಸುಪ್ರೀಂ ಕೋರ್ಟು ತಿರಸ್ಕರಿಸಿದೆ. ಇಸ್ಲಾಮಿನಲ್ಲಿ ನಮಾಝ್‍ಗೆ ಮಸೀದಿ ಅವಿಭಾಜ್ಯ ಘಟಕವಲ್ಲ ಎಂದು 1994ರಲ್ಲಿ ಇಸ್ಮಾಯೀಲ್ ಫಾರೂಕಿ ಪ್ರಕರಣದಲ್ಲಿ ಐದು ಮಂದಿ ಸದಸ್ಯರ ತೀರ್ಪನ್ನು ಏಳು ಮಂದಿ ಸದಸ್ಯರ ಸಂವಿಧಾನ ಪೀಠದ ಪರಾಮರ್ಶೆಗೊಪ್ಪಿಸಬೇಕೆಂದು ಸುನ್ನಿ ವಕ್ಫ್ ಬೋರ್ಡು ಅರ್ಜಿ ಸಲ್ಲಿಸಿತ್ತು. ಮೂವರು ಸದಸ್ಯರಿದ್ದ ಚೀಫ್ ಜಸ್ಟಿಸ್ ದೀಪಕ್ ಮಿಶ್ರರ ನೇತೃತ್ವದ ಪೀಠ ಅರ್ಜಿಯನ್ನು ತಿರಸ್ಕರಿಸಿದೆ. ಚೀಫ್ ಜಸ್ಟಿಸ್ ದೀಪಕ್ ಮಿಶ್ರ , ಜಸ್ಟಿಸ್ ಅಶೋಕ್ ಭೂಷಣ್ ಸಹಮತದ ತೀರ್ಪು ಮತ್ತು ಜಸ್ಟಿಸ್ ಎಸ್. ಅಬ್ದುಲ್ ನಝೀರ್ ಬೇರೆಯೇ ತೀರ್ಪನ್ನು ಹೊರಡಿಸಿದ್ದಾರೆ.

Leave a Reply