ಗದಗ: ತುಂಬು ಗರ್ಭಿಣಿಯೊಬ್ಬರು ಚಲಿಸುತ್ತಿದ್ದ ಬಸ್ಸಿನಲ್ಲೇ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು, 28 ವರ್ಷದ ಕಾವ್ಯ ಮರಳಹಳ್ಳಿ ಎಂಬುವರು ಮಗುವಿಗೆ ಬಸ್ಸಿನಲ್ಲೇ ಜನ್ಮ ನೀಡಿದ ತಾಯಿ.

ಮೂಲತಃ ಬಾಲೆಹೋಸುರು ಗ್ರಾಮದ ನಿವಾಸಿಯಾಗಿರುವ ಅವರು ಗುತ್ತಲ ದಿಂದ ಸೂರಣಗಿ ಮಾರ್ಗವಾಗಿ ಲಕ್ಷ್ಮೇಶ್ವರಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಹೆರಿಗೆ ಬೇನೆ ಸಂಭವಿಸಿದ್ದು, ಬಸ್ಸಿನ ನಿರ್ವಾಹಕರು ಆಕೆಯನ್ನು ಬಸ್ಸಿನಲ್ಲೇ ಆಸ್ಪತ್ರೆಗೆ ಸಾಗಿಸಲು ಮುಂದಾದರು. ಹೀಗೆ ಬಸ್ಸು ಆಸ್ಪತ್ರೆಯ ದಾರಿಯಲ್ಲಿ ಚಲಿಸುವ ವೇಳೆ ಅವರಿಗೆ ಹೆರಿಗೆಯಾಗಿದೆ. ಬಸ್ಸಿನ ಚಾಲಕ ಏನ್. ಎಂ ಉಪ್ಪಾರ ಹಾಗೂ ನಿರ್ವಾಹಕ ಕಟ್ಟನ್ನವರ ಮಾನವೀಯತೆಗೆ ಎಲ್ಲರೂ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

ನಂತರ ಆಸ್ಪತ್ರೆಗೆ ತಲುಪಿದ ಬಳಿಕ ಸರ್ಕಾರಿ ವೈದ್ಯರು ತಾಯಿ ಮಗುವಿಗೆ ಹೆಚ್ಚಿನ ಚಿಕಿತ್ಸೆ ನೀಡಿದ್ದಾರೆ. ಮಗು ಮತ್ತು ತಾಯಿ ಆರೋಗ್ಯದಿಂದ ಇದ್ದಾರೆ ಎಂದು ತಿಳಿದು ಬಂದಿದೆ.

photo courtesy : Public Tv

Leave a Reply