ಬೇಕಾಗುವ ಸಾಮಗ್ರಿಗಳು:
ಬಾಳೆಕಾಯಿ
ಕಡ್ಲೆಹಿಟ್ಟು – ಒಂದು ಬಟ್ಟಲು
ಅಕ್ಕಿಹಿಟ್ಟು – ಎರಡು ಚಮಚ
ಅಚ್ಚಖಾರದ ಪುಡಿ
ಉಪ್ಪು
ಓಮಕಾಳು
ಕಾದ ಎಣ್ಣೆ – ಒಂದು ಚಮಚ
ಚಿಟಿಕೆ ಸೋಡ
ಕಲೆಸಲು ಬೇಕಾಗುವಷ್ಟು ನೀರು
ಕರಿಯಲು ಎಣ್ಣೆ

ತಯಾರಿಸುವ ವಿಧಾನ:

*ಬಾಳೆಕಾಯಿ ಸಿಪ್ಪೆ ತೆಗೆಯಿರಿ,ಬಾಳೆಕಾಯಿ ಸಿಪ್ಪೆ ತೆಗೆದಾಗ ಅಂಟಾಗುತ್ತದೆ. ಅದಕ್ಕಾಗಿ ಅದನ್ನು ತೆಳುವಾಗಿ ಹೆಚ್ಚಿಕೊಂಡ ತಕ್ಷಣ ಸ್ವಲ್ಪ ಉಪ್ಪು ಹಾಕಿದ ನೀರಿನಲ್ಲಿ ಹಾಕಿಡಿ. ಇಲ್ಲ ಅಂದರೆ ಕಾಯಿ ಬೇಗ ಕಪ್ಪಾಗುತ್ತದೆ. ಉಪ್ಪು ಜೊತೆ ವಿನಿಗರ್ ಕೂಡ ಬೆರೆಸಿದರೆ ಇನ್ನೂ ಒಳ್ಳೆಯದು. ಬಾಳೆಕಾಯಿಯ ಸ್ಲೈಸ್ ಕಪ್ಪು ಮತ್ತು ಅಂಟು-ಅಂಟು ಆಗದಂತೆ ಚೆನ್ನಾಗಿರುತ್ತದೆ.
ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಓಮಕಾಳು,ಉಪ್ಪು, ಅಚ್ಚಖಾರದ ಪುಡಿ ಮತ್ತು ಸೋಡ ಹಾಕಿ ಚೆನ್ನಾಗಿ ಬೆರೆಸಿ, ಅದಕ್ಕೆ ಕಾದಿರುವ ಎಣ್ಣೆ ಹಾಕಿ, ಜೊತೆಯಲ್ಲಿ ನೀರು ಹಾಕಿ, ಕಲೆಸಿಕೊಳ್ಳಿ, ಎಲ್ಲವನ್ನು ಚೆನ್ನಾಗಿ ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಎಣ್ಣೆಯನ್ನು ಕಾಯಲು ಇಟ್ಟು, ಅದು ಕಾದ ನಂತರ, ಹೆಚ್ಚಿರುವ ಬಾಳೆಕಾಯಿಯನ್ನು ಕಲೆಸಿರುವ ಹಿಟ್ಟಿನಲ್ಲಿ ಅದ್ದಿ, ಕಾದಿರುವ ಎಣ್ಣೆಯಲ್ಲಿ ಅದನ್ನು ತೇಲಿಬಿಡಿ. ಅದು ಮೇಲೆ ಬಂದಾಗ ತಿರುವಿ ಹಾಕಿ, ಎರಡು ಬದಿಯೂ ಚೆನ್ನಾಗಿ ಬೇಯಿಸಿ. ಎಣ್ಣೆಯಿಂದ ತೆಗೆದು ಪೇಪರ್ ಟವಲ್ ಮೇಲೆ ಹಾಕಿ. ರುಚಿರುಚಿಯಾದ ಬಾಳೆಕಾಯಿ ಬಜ್ಜಿ ತಯಾರ್. ಇದನ್ನು ಬಿಸಿಯಾಗಿ ತಿಂದರೆ ತುಂಬಾ ಚೆನ್ನಾಗಿ ಇರುತ್ತದೆ. ಬೇಕಾದರೆ ಚಟ್ನಿಯೊಂದಿಗೆ ಸರ್ವ್ ಮಾಡಬಹುದು. ಕಾಯಿ ಚಟ್ನಿ ತುಂಬಾ ರುಚಿ.(indiankannadarecipes)

ಈ ವಿಡಿಯೋದಂತೆಯೂ ಮಾಡಬಹುದು

LEAVE A REPLY

Please enter your comment!
Please enter your name here