ಪನಾಮರಂ: ಕೋವಿಡ್- 19 ವೈರಸ್ ಸೋಂಕಿನ ಕಾರಣ ದೇಶಾದ್ಯಂತ ಏಕಾಏಕಿ ಹೇರಲಾದ ಲಾಕ್ ಡೌನ್ ಸಮಯದಲ್ಲಿ ಹಲವಾರು ಕಲೆಗಳು ಮರು ಜೀವ ಪಡೆದುಕೊಂಡಿದೆ. ಯುವಕನೊಬ್ಬ ಮನೆಯಲ್ಲೇ ಕುಳಿತು ತಾಜ್ ಮಹಲ್, ಶಬರಿ ಮಲೆ ಮುಂತಾದ ಆಕರ್ಷಕ ಕರಕುಶಲ ಕಲಾಕೃತಿಗಳನ್ನು ಬಿದಿರಿನಲ್ಲೇ ತಯಾರಿಸಿದ್ದಾರೆ. ಕೇರಳದ ಪನಾಮರಂನ ಕವದಂ ಕಾಲೋನಿ ಮೂಲದ ಬಾಬು ಈಗ ತನ್ನ ಕರಕುಶಲ ಕಲಾಕೃತಿಗಳನ್ನು ಮಾರುಕಟ್ಟೆಗೆ ತರಲು ಪ್ರಯತ್ನಿಸುತ್ತಿದ್ದಾರೆ.

ಬಾಲ್ಯದಿಂದಲೂ ಬಾಬು ಬಿದಿರಿನಿಂದ ಹಲವಾರು ವಿವಿಧ ಆಕರ್ಷಕ ವಸ್ತುಗಳನ್ನು ತಯಾರಿಸುತ್ತಿದ್ದರು ಈ ವಸ್ತುಗಳ ಪೈಕಿ, ಬಿದಿರಿನ ಗಿಟಾರ್, ತ್ರಿಶೂಲ (ಮೂರು ಮುಖದ ಈಟಿ) ಮತ್ತು ವೀಣಾ ಬಾಬು ಅವರ ಆರ್ಟ್ ಗ್ಯಾಲರಿಯಲ್ಲಿ ಇಂದಿಗೂ ಪ್ರಮುಖ ಆಕರ್ಷಣೆಗಳಾಗಿವೆ. 7 ನೇ ತರಗತಿ ವರೆಗೆ ಶಾಲೆ ಕಲಿತಿರುವ ಬಾಬು ತರಬೇತಿ ಪಡೆದ ಕುಶಲಕರ್ಮಿಗಳಲ್ಲದಿದ್ದರೂ, ಬಾಬು ಅವರ ಅದ್ಭುತ ಕೃತಿಗಳಿಂದ ಎಲ್ಲರನ್ನು ಅಚ್ಚರಿಗೊಳಿಸುತ್ತಾರೆ. ಬಾಬು ದೈನಂದಿನ ಕೂಲಿ ಕೆಲಸ ಮಾಡುವ ಮೂಲಕ ತನ್ನ ವಯಸ್ಸಾದ ಪೋಷಕರು ಸೇರಿದಂತೆ ತನ್ನ ಕುಟುಂಬವನ್ನು ನೋಡಿಕೊಳ್ಳುತ್ತಾರೆ. ತನ್ನ ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಸಿಕ್ಕಿದರೆ ಉತ್ತಮ ಆದಾಯ ಗಳಿಸಬಹುದು ಎಂದು ಬಾಬು ಆಶಿಸುತ್ತಾರೆ.

LEAVE A REPLY

Please enter your comment!
Please enter your name here