ಸಾಂದರ್ಭಿಕ ಚಿತ್ರ

ಲಕ್ನೊ: ಅತ್ಯಾಚಾರಕ್ಕೆ ಶ್ರಮಿಸಿದಾಗ ಪ್ರತಿರೋಧಿಸಿದ 15 ವರ್ಷದ ಬಾಲಕಿಯನ್ನು ಹೊಡೆದು ಕೊಂದು ಮೃತದೇಹವನ್ನು ಮರಕ್ಕೆ ನೇತುಹಾಕಿದ ಘಟನೆ ಉತ್ತರಪ್ರದೇಶದ ಮೆಯಿನ್‍ಪುರಿಜಿಲೆಯಲ್ಲಿ ಕಳೆದ ದಿವಸ ನಡೆದಿದೆ. ಶಾಲೆಯಿಂದ ಮರಳುತ್ತಿದ್ದ ವೇಳೆ ಬಾಲಕಿಯನ್ನು ಅತ್ಯಾಚಾರ ಮಾಡಲು ನಾಲ್ವರು ಪ್ರಯತ್ನಿಸಿದ್ದರು. ಇವರಲ್ಲಿ ಮೂವರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಗಾಂಧಿಜಯಂತಿಯ ದಿನದಲ್ಲಿ ಶಾಲೆಯ ಕಾರ್ಯಕ್ರಮ ಮುಗಿಸಿ ಸಹೋದರನೊಂದಿಗೆ ಬಾಲಕಿ ಮನೆಗೆ ಬರುತ್ತಿದ್ದಳು. ಆಗ ನಾಲ್ವರು ತಡೆದು ನಿಲ್ಲಿಸಿ ಬಾಲಕಿಯನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ.ಸಹೋದರನನ್ನು ನಾಲ್ವರು ಬೆದರಿಸಿದ್ದಾರೆ.ಅತ್ಯಾಚಾರಕ್ಕೆ ಮುಂದಾದ ದುಷ್ಕರ್ಮಿಗಳನ್ನು ಬಾಲಕಿ ಪ್ರತಿರೋಧಿಸಿದ್ದಾಳೆ.

ನಂತರ ಬಾಲಕಿಗೆ ನಾಲ್ವರು ಸೇರಿ ಮಾರಣಾಂತಿಕವಾಗಿ ಹೊಡೆದರು. ಗಂಭೀರ ಗಾಯಗೊಂಡ ಬಾಲಕಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಳು. ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದಾಗಲಿ ಎಂದು ಮೃತದೇಹವನ್ನು ನಾಲ್ವರು ಸೇರಿ ಮರಕ್ಕೆ ನೇತುಹಾಕಿ ಪರಾರಿಯಾಗಿದ್ದರು. ಬಾಲಕಿಯ ಮೃತದೇಹ ಮರದಲ್ಲಿ ನೇತಾಡುತ್ತಿರುವುದನ್ನುಕಂಡು ಊರವರು ಪೊಲೀಸರಿಗೆ ಸುದ್ದಿಮುಟ್ಟಿಸಿದ್ದು, ನಂತರ ಘಟನೆಯಲ್ಲಿ ಗಾಯಗೊಂಡ ಬಾಲಕಿಯ ಸಹೋದರ ಪತ್ತೆಯಾಗಿದ್ದ.

ನಾಲ್ವರು ಆರೋಪಿಗಳನ್ನು ಪೊಲೀಸರು ಗುರುತಿಸಿದ್ದು. ಶಿವಂ,ಮಂಗಳ್. ವಿಕಾಸ್ ಎಂಬವರನ್ನು ಪೊಲೀಸರು ಘಟನೆ ನಡೆದು ಒಂದು ಗಂಟೆಯಾಗುವಷ್ಟರಲ್ಲಿ ಬಂಧಿಸಿದ್ದಾರೆ.
ಇನ್ನೊಬ್ಬ ಆರೋಪಿ ರಾಮ್‍ವೀರ್ ತಲೆತಪ್ಪಿಸಿಕೊಂಡಿದ್ದು ಪೊಲೀಸರು ಅವನ ಪತ್ತೆಗೆ ಬಲೆ ಬೀಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply