ಭುಜದ ನೋವಿನ ಚಿಕಿತ್ಸೆ ಮಾಡುತ್ತಿದ್ದ ರೂಪದರ್ಶಿಯೊಬ್ಬಳು ತನಗೆ ಮಾಸಾಜ್ ಮಾಡಿದವನಿಗೆ ಇರಿದ ಘಟನೆ ವರದಿಯಾಗಿದೆ. ಮಸಾಜ್ ಮಾಡಿದ್ದು ಸರಿಯಾಗಿಲ್ಲ ಎಂದು ಕೋಪಗೊಂಡ ರೂಪದರ್ಶಿ ಮರಿಯಾ ಡೆಲೊಸ್ಯಾಂಜೆಲೆಸ್ ಹೊರಿಗೋಮ್ ಈ ಕೃತ್ಯ ಎಸಗಿದ್ದು, ಸಾಕಷ್ಟು ಚರ್ಚೆಗೀಡಾಗಿದೆ. ಆಸ್ಟ್ರೇಲಿಯಾದಲ್ಲಿ 2018ರ ಮಿಸ್ ನ್ಯಾಷನಲ್ ಫೈನಲಿಸ್ಟ್ ಆಗಿದ್ದ ಈ ರೂಪದರ್ಶಿ ಮಸಾಜ್ ಪಾರ್ಲರ್ ಗೆ ನಿಯಮಿತವಾಗಿ ಹೋಗುತ್ತಿದ್ದಳು. ಭುಜದ ನೋವು ಕಡಿಮೆಯಾಗದ ಕಾರಣ ಆಕೆ ಪಾರ್ಲರ್ ಗೆ ತನ್ನ ಫೀಸು ನೀಡಲು ನಿರಾಕರಿಸಿದ್ದಳು. ಈ ಮಧ್ಯೆ ವಾಗ್ವಾದ ನಡೆದು ಆಕೆ ತನ್ನ ಬ್ಯಾಗ್ ನಲ್ಲಿದ್ದ ಚೂಪಾದ ಚಾಕುವಿನಿಂದ ಆತನಿಗೆ ಇರಿದಿದ್ದಾಳೆ. ಆತನಿಗೆ ಚಿಕಿತ್ಸೆ ನೀಡಲಾಗಿದೆ. ಈ ಜಟಾಪಟಿಯಲ್ಲಿ ಆಕೆಯ ಮೂಗು ಮತ್ತು ಮುಖಕ್ಕೆ ಗಾಯವಾಗಿದ್ದು, ನನ್ನ ಮಾಡೆಲಿಂಗ್ ಕರಿಯರ್ ಮತ್ತು ಸಂಪಾದನೆಗೆ ತೊಡಕಾಗಿದೆ ಎಂದು ರೂಪದರ್ಶಿ ದೂರಿಕೊಂಡಿದ್ದಾಳೆ.

Leave a Reply